ನಾವೇ ಬೆಳೆದ ಅರಿಶಿಣವೇ ಯೋಗ್ಯ

Mahesh
Published on

ಚಾಮರಾಜನಗರ: ರೈತರ ಜಮೀನಿನಲ್ಲಿ ಇರುವ ಮಣ್ಣಿನ ಗುಣಮಟ್ಟದ ಆಧಾರದಲ್ಲಿ ಅರಿಶಿಣ ಉತ್ತಮ ಇಳುವರಿ ಬರುತ್ತದೆ. ಮಣ್ಣು ಯೋಗ್ಯವಾಗಿ ಇಲ್ಲದಿದ್ದರೆ ಇಳುವರಿ ಕುಂಠಿತವಾಗುತ್ತದೆ ಎಂದು ತಾಲೂಕಿನ ದಡದಹಳ್ಳಿ ಗ್ರಾಮದ ಅರಿಶಿಣ ಬೆಳೆಗಾರ ಮಹೇಶ್ ತಿಳಿಸಿದರು.

ಅರಿಶಿಣ ಬೆಳೆಗೆ ಉತ್ತಮ ಬೆಲೆ ಬಂದಿದ್ದ ಕಾರಣ ಹಲವು ರೈತರು ಅಧಿಕ ಪ್ರಮಾಣದಲ್ಲಿ ಈ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಗುಣಮಟ್ಟ ಪರಿಶೀಲನೆ ಮಾಡದೆ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿ, ರೈತರು ಜಾಗೃತೆ ವಹಿಸಬೇಕೆಂದರು.

ಬಿತ್ತನೆ ಅರಿಶಿಣ ಖರೀದಿಯ ಸಂದರ್ಭದಲ್ಲಿ ಜಾಗೃತಿ ಅಗತ್ಯವಾಗುತ್ತದೆ. ಬಿತ್ತನೆ ಅರಿಶಿಣಕ್ಕೆ ಹೆಚ್ಚು ಬೆಲೆ ಇದೆ ಎಂಬ ಕಾರಣಕ್ಕೆ ತಕ್ಷಣಕ್ಕೆ ಕಿತ್ತು ತಂದಿರುವ ಅರಿಶಿಣವನ್ನು ಬಿತ್ತನೆ ಮಾಡಬಾರದು. ಇದರಿಂದ ಅರಿಶಿಣ ಕೊಳೆತು ಹೋಗುತ್ತದೆ. ಕಳೆದ 5 ವರ್ಷಗಳಿಂದ ನಮ್ಮದೇ ಜಮೀನಿನಲ್ಲಿ ಬೆಳೆಯುತ್ತಿರುವ ಅರಿಶಿಣವನ್ನು ಬಿತ್ತನೆ ಮಾಡುತ್ತಿರುವುದರಿಂದ ಇಳುವರಿ ಚೆನ್ನಾಗಿ ಬರುತ್ತದೆ ಎಂದ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net