ಅಧಿಕಾರಿಗಳ ನಿರ್ಲಕ್ಷ್ಯ

honnur prakash
Published on

ಚಾಮರಾಜನಗರ:ಕೇಂದ್ರ ಸರ್ಕಾರ ಒಂದು ಉತ್ಪನ್ನ, ಒಂದು ಜಿಲ್ಲೆ ಅಡಿಯಲ್ಲಿ ಅರಿಶಿಣ ಬೆಳೆಯನ್ನು ಗುರುತು ಮಾಡಲಾಗಿದೆ. ಆದರೆ ಗುಣಮಟ್ಟದ ಅರಿಶಿಣ ಬಿತ್ತನೆಯನ್ನು ರೈತರಿಗೆ ಪೂರೈಕೆ ಮಾಡುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಆರೋಪಿಸಿದರು.

ಅರಿಶಿಣ ಬೆಳೆಗೆ ಉತ್ತಮ ಬೆಲೆ ಬಂದಿದ್ದ ಕಾರಣ ಹಲವು ರೈತರು ಅಧಿಕ ಪ್ರಮಾಣದಲ್ಲಿ ಈ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಗುಣಮಟ್ಟ ಪರಿಶೀಲನೆ ಮಾಡದೆ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಜಾಗೃತೆ ವಹಿಸಲು ವಿಜಯವಾಣಿಯೊಂದಿಗೆ ಅವರು ಮಾತನಾಡಿದ್ದಾರೆ.

ಗುಂಡ್ಲುಪೇಟೆಯ ತೆರಕಣಾಂಬಿ, ಇನ್ನಿತರ ಸಂತೆಗಳಲ್ಲಿ ತಮಿಳುನಾಡಿನ ಮೂಲದವರು ಬಿತ್ತನೆ ಅರಿಶಿಣವನ್ನು ಮಾರಾಟ ಮಾಡುತ್ತಾರೆ. ಆ ಅರಿಶಿಣ ರೈತರ ಜಮೀನಿಗೆ ಯೋಗ್ಯವಾಗಿದೆಯೋ ಎಂದು ಪರಿಶೀಲನೆ ಮಾಡದೆ, ಬಿತ್ತನೆ ಮಾಡುವುದರಿಂದ ಸಾಕಷ್ಟು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ದೃಷ್ಟಿಯಲ್ಲಿ ಗುಣಮಟ್ಟದ ಬಿತ್ತನೆ ಅರಿಶಿಣವನ್ನು ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net