

ಚಾಮರಾಜನಗರ: ರೈತರು ಉತ್ತಮವಾದ ಅರಿಶಿಣ ಬೆಳೆ ಇರುವ ತೋಟಗಳನ್ನು ನೋಡಿ, ಸಲು ಕೀಳುವ ಸಂದರ್ಭದಲ್ಲಿ ಬಿತ್ತನೆ ಖರೀದಿ ಮಾಡಿದರೆ ಅನುಕೂಲವಾಗುತ್ತದೆ ಎಂದು ಗುಂಡ್ಲುಪೇಟೆ ಅರಿಶಿಣ ಬೆಳೆಗಾರ ನಾಗಾರ್ಜುನ್ ತಿಳಿಸಿದಾರೆ.
ಅರಿಶಿಣ ಬೆಳೆಗೆ ಉತ್ತಮ ಬೆಲೆ ಬಂದಿದ್ದ ಕಾರಣ ಹಲವು ರೈತರು ಅಧಿಕ ಪ್ರಮಾಣದಲ್ಲಿ ಈ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಗುಣಮಟ್ಟ ಪರಿಶೀಲನೆ ಮಾಡದೆ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಜಾಗೃತೆ ವಹಿಸಲು ವಿಜಯವಾಣಿಯೊಂದಿಗೆ ಅವರು ಮಾತನಾಡಿದ್ದಾರೆ.
ಬಿತ್ತನೆ ಬೀಜ ಎಲ್ಲಿ? ಹೇಗಿದೆ? ಎಷ್ಟು ಇಳುವರಿ ಬರುತ್ತದೆ? ಎಂಬುದು ಗೊತ್ತಿರುವುದಿಲ್ಲ. ಆ ಮಾಹಿತಿ ಇಲ್ಲದೇ ಖರೀದಿ ಮಾಡಿ ಬಿತ್ತನೆ ಮಾಡಿದರೆ ಅದು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇಳುವರಿ ಕುಂಠಿತವಾಗಿ, ರೋಗಗಳು ಬರುವ ಸಾಧ್ಯತೆಯೂ ಇರುತ್ತದೆ. ಈ ನಿಟ್ಟಿನಲ್ಲಿ ರೈತರು ರೋಗರಹಿತವಾದ ಅರಿಶಿಣವನ್ನು ಖರೀದಿ ಮಾಡಬೇಕು. ರೈತನಿಗೆ ಅವಶ್ಯಕತೆ ಹೆಚ್ಚಾದಾಗ ಬೇಡಿಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ರೈತರು ಬುದ್ಧಿವಂತಿಕೆಯಿಂದ ಬಿತ್ತನೆ ಅರಿಶಿಣವನ್ನು ಖರೀದಿ ಮಾಡಬೇಕು. ಪ್ರಸ್ತುತ ಬಿತ್ತನೆ ಅರಿಶಿಣಕ್ಕೆ 5-6 ಸಾವಿರ ರೂ. ಇದೆ. ಈ ನಿಟ್ಟಿನಲ್ಲಿ ರೈತರು ಬಂಡವಾಳ ಹೂಡುವಾಗ ಜಾಗ್ರತೆ ವಹಿಸಬೇಕಿದೆ. ಎಂದರು.