ಚಾಮರಾಜನಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ಸಮಾಜ ಸೇವಕ ಸುರೇಶ್‌ಗೌಡ್ರು ಗೆಳೆಯರ ಬಳಗದ ವತಿಯಿಂದ ಜೂ.1ರಂದು ನಗರದ ವಿವಿಧ ಶಾಲೆಗಳಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಸೇವಾ ಭಾರತಿ ಶಾಲೆ, ಬಂಜಾರ ಇಂಡಿಯನ್ ಪಬ್ಲಿಕ್ ಶಾಲೆ, ಜೆ.ಎಸ್.ಎಸ್ ಬಾಲಕರ ಪ್ರೌಢಶಾಲೆ, ಜೆ.ಎಸ್.ಎಸ್ ಬಾಲಕಿಯರ ಪ್ರೌಢಶಾಲೆ, ಜೆ.ಎಸ್.ಎಸ್. ಪಬ್ಲಿಕ್ ಶಾಲೆ, ಎಂ.ಸಿ.ಎಸ್ ಪ್ರೌಢಶಾಲೆ, ಯೂನಿವರ್ಸೆಲ್ ಸ್ಕೂಲ್ನಲ್ಲಿ ಶನಿವಾರ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಪರಿಸರ ಸಂರಕ್ಷಣೆ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ-3000, ದ್ವಿತೀಯ-2000, ತೃತೀಯ-1000, ಇಬ್ಬರಿಗೆ ತಲಾ 500 ರೂ. ಸಮಾಧಾನಕರ ನಗದು ಬಹುಮಾನವನ್ನು ನಗರದ ಭ್ರಮರಾಂಬ ಬಡಾವಣೆಯಲ್ಲಿರುವ ವಿಜಯವಾಣಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಸಮಾಜ ಸೇವಕ ಸುರೇಶ್‌ಗೌಡ್ರು ವಿತರಣೆ ಮಾಡಲಿದ್ದಾರೆ.