ಅನಾರೋಗ್ಯದಿಂದ ಲಾರಿ ಚಾಲಕ ಸಾವು

Published on

ಗುಂಡ್ಲುಪೇಟೆ; ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀಪ ಚಾಲಕನೊಬ್ಬ ಅನಾರೋಗ್ಯದಿಂದ ಲಾರಿಯಲ್ಲಿಯೇ ಸಾವಿಗೀಡಾದ ಘಟನೆ ಗುರುವಾರ ನಡೆದಿದೆ.

ಅಶೋಕ್ ಮೃತರು. ಪಟ್ಟಣದ ಪ್ರದೀಪ್ ಎಂಬುವರು ಲಾರಿಯಲ್ಲಿ ಮಲಗಿದ್ದ ಚಾಲಕನನ್ನು ಎಷ್ಟು ಪ್ರಯತ್ನಿಸಿದರೂ ಎಚ್ಚರಗೊಳ್ಳದ ಬಗ್ಗೆ ಅನುಮಾನಗೊಂಡು ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು. ಆತನನ್ನು ಪರಿಶೀಲಿಸಿದಾಗ ಅನಾರೋಗ್ಯದಿಂದ ಬಳಲುತ್ತಿದ್ದ ಚಾಲಕ ಮಾತ್ರೆ ಮತ್ತು ಟಾನಿಕ್ ಸೇವಿಸಿ ವಾಂತಿ ಮಾಡಿಕೊಂಡಿದ್ದು ಕಂಡುಬಂದಿತು. ಕೂಡಲೇ ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net