ಕೊಳ್ಳೇಗಾಲದಲ್ಲಿ ನಿಯೋಗ ದಿನ ಆಚರಣೆ

29-kglphoto-1,,
Published on

ಕೊಳ್ಳೇಗಾಲ: ಪಟ್ಟಣದ ಬಸವೇಶ್ವರನಗರ ಬಡಾವಣೆಯಲ್ಲಿ ಬುಧವಾರ ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್, ಅರೇಡ್ಸ್ ಬಿಜಿನೆಸ್ ಅಸೋಸಿಯೇಟ್ಸ್ ಸಂಸ್ಥೆ, ಸ್ಟೇಟ್ ಬ್ಯಾಂಕ್ ಇಂಡಿಯಾ ಸಹಯೋಗದಲ್ಲಿ ನಿಯೋಗ ದಿನ(ಡೆಲಿಗೇಶನ್‌ಡೇ) ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ ಮಾತನಾಡಿ, ಅರೇಡ್ಸ್ ಬಿಜಿನೆಸ್ ಅಸೋಸಿಯೇಟ್ಸ್ ಸಂಸ್ಥೆ ಮತ್ತು ಸ್ಟೇಟ್ ಬ್ಯಾಂಕ್ ಇಂಡಿಯಾ ಸಹಕಾರದೊಂದಿಗೆ ರೈತರಿಗೆ ಸಾಲ ಸೌಲಭ್ಯ ಕೊಡಿಸುವ ಕೆಲಸ ಮಾಡುತ್ತಿದೆ ಎಂದರು.

ಈಗಾಗಲೇ ಮೈಸೂರು ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಅಂತೆಯೇ ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಭಾಗದಲ್ಲಿ ಬ್ರಾೃಂಚ್‌ಗಳನ್ನು ತೆರೆದು ಈ ಭಾಗದ ರೈತರಿಗೆ ಅನುಕೂಲ ಮಾಡಲು ಮುಂದಾಗಿದ್ದೇವೆ. ಅಲ್ಲದೆ, ಈ ಭಾಗದವರಿಗೆ ನಮ್ಮ ಸಂಸ್ಥೆ ವತಿಯಿಂದ ಸಂಯೋಜಕರ ಹುದ್ದೆ ನೀಡಲಾಗಿದೆ. ಇವರು ರೈತರನ್ನು ಎಸ್‌ಬಿಐ ಬ್ಯಾಂಕ್‌ಗೆ ಕರೆದೊಯ್ದು ನೇರವಾಗಿ ಸಾಲ ಮಂಜೂರು ಮಾಡಿಸಿಕೊಡುತ್ತಾರೆ ಎಂದರು.

ಟ್ರಸ್ಟ್‌ನ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಂಯೋಜಕರಿಗೆ ನೇಮಕಾತಿ ಆದೇಶ ಪತ್ರ ಹಾಗೂ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅರೇಡ್ಸ್ ಸಂಸ್ಥೆಯ ಅಧ್ಯಕ್ಷ ಶರವಣ, ನಿರ್ದೇಶಕಿ ಉಮಾ ಮಹೇಶ್ವರಿ, ಮಧುಕುಮಾರ್, ವಸುಂಧರ, ಬಿಇಎಂಎಲ್ ನಿವೃತ್ತ ಕಾರ್ಯಪಾಲಕ ನಿರ್ದೇಶಕ ಬಿ.ಶಂಕರ್, ನಿವೃತ್ತ ಕೃಷಿ ಅಧಿಕಾರಿ ಶಿವರಾಮೇಗೌಡ, ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ದಿವ್ಯಶ್ರೀ, ಜಿಲ್ಲಾ ಸಂಯೋಜನಾಧಿಕಾರಿ ರಾಜಣ್ಣ, ಚಿಕ್ಕಲಿಂಗೇಗೌಡ, ಕಾವ್ಯಾ, ಆರ್.ಪಿ.ಶಶಾಂಕ್, ಗುರುಪ್ರಸಾದ್, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net