ಸಂವಿಧಾನೋತ್ಸವ ಸಮಾವೇಶ

09raju1
Published on

ಚಾಮರಾಜನಗರ: ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಹೋರಾಟ ಚಾಲನಾ ಸಮಿತಿ ವತಿಯಿಂದ ಆಗಸ್ಟ್ ಮೊದಲ ವಾರದಲ್ಲಿ ಸಂವಿಧಾನೋತ್ಸವ ಹಾಗೂ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಕೆ.ಎಂ.ನಾಗರಾಜು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿಎಸ್‌ಎಸ್ ಐಕ್ಯತಾ ಹೋರಾಟ ಚಾಲನಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಐಕ್ಯತಾ ಹೋರಾಟ ಚಾಲನಾ ಸಮಿತಿಯ 13 ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಮಿತಿ ಮುಖಂಡರಾದ ಸಿ.ಎಂ.ಶಿವಣ್ಣ, ರಾಮಸಮುದ್ರ ಸುರೇಶ್, ಯರಿಯೂರು ರಾಜಣ್ಣ, ಸುಭಾಷ್ ಮಾಡ್ರಳ್ಳಿ, ಕಂದಹಳ್ಳಿ ನಾರಾಯಣ್, ನಂಜುಂಡಸ್ವಾಮಿ, ಉಮ್ಮತ್ತೂರು ಸೋಮಣ್ಣ, ಹೊನ್ನೂರು ರಾಜೇಂದ್ರ, ರಂಗಸ್ವಾಮಿ ಗುಂಡ್ಲುಪೇಟೆ, ಸಿದ್ದರಾಜು, ಶಿವಕುಮಾರ್, ಸುರೇಂದ್ರಕುಮಾರ್, ನಾಗಶೇಖರ್, ನಿವೃತ್ತ ಎಎಸ್‌ಐ ರಾಮಸಮುದ್ರ ಸಿದ್ದರಾಜು, ಸಾಹಿತಿ ಸಿದ್ದರಾಜು, ಮರಿಯಾಲದಹುಂಡಿ ಕುಮಾರ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net