

ಚಾಮರಾಜನಗರ: ನಗರದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಸ್ಟ್ರಾ, ಲೋಟ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಕೊಂಡು ಮಂಗಳವಾರ ದಂಡ ವಿಧಿಸಿದರು.
ನಗರದ ದೊಡ್ಡ ಅಂಗಡಿ ಹಾಗೂ ಚಿಕ್ಕ ಅಂಗಡಿ ಬೀದಿಯ ಕೆಲವು ಅಂಗಡಿಗಳಲ್ಲಿ ಮದುವೆ ಹಾಗೂ ಇತರ ಸಮಾರಂಭಗಳಿಗೆ ನಿಷೇಧಿತ ಪ್ಲಾಸ್ಟಿಕ್ ಲೋಟ, ಕ್ಯಾರಿ ಬ್ಯಾಗ್ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.
ಪೌರಾಯುಕ್ತ ರಾಮದಾಸ್, ಆರೋಗ್ಯ ನಿರೀಕ್ಷಕರಾದ ಮಂಜುನಾಥ, ಪುಷ್ಪ, ನಗರಸಭೆ ಸಿಬ್ಬಂದಿ ಸಂತೋಷ, ಪ್ರಸಾದ್, ರುದ್ರೇಶ್, ರೀತಿಕ್, ತನ್ವಿರ್, ಅರ್ಫಾಜ್, ರಾಜೇಂದ್ರ ಇತರರು ಇದ್ದರು.