7 ಸೀಳು ನಾಯಿಗಳ ಕಳೇಬರ ಪತ್ತೆ

29rajesh6
Published on

ಕೊಳ್ಳೇಗಾಲ: ತಾಲೂಕಿನ ಕುಣಗಳ್ಳಿ ಗ್ರಾಮದ ಚಾನಲ್ ರಸ್ತೆಯಿಂದ ಹಿತ್ತಲದೊಡ್ಡಿಗೆ ಸಂಪರ್ಕ ಬೆಸೆಯುವ ಕಚ್ಚಾ ರಸ್ತೆಯ ಸಮೀಪದ ಸರ್ಕಾರಿ ಜಾಗದಲ್ಲಿ 7 ಸೀಳು ನಾಯಿಗಳ ಕಳೇಬರ ಪತ್ತೆಯಾಗಿದೆ.

ಮಲೆ ಮಹದೇಶ್ವರ ವನ್ಯ ಜೀವ ವಿಭಾಗದ ಕೊಳ್ಳೇಗಾಲ ಬಫರ್ ಝೋನ್ ವ್ಯಾಪ್ತಿಗೆ ಬರುವ ಕುಣಗಳ್ಳಿ ಗ್ರಾಮದ ಚಾನಲ್ ರಸ್ತೆಯಿಂದ ಹಿತ್ತಲದೊಡ್ಡಿಗೆ ಗ್ರಾಮಕ್ಕೆ ತೆರಳುವ ಕಚ್ಚಾ ರಸ್ತೆಯ ಬದಿಯಲ್ಲಿ ಸಿಗುವ ಸ.ನಂ.492 ಸರ್ಕಾರಿ ಜಾಗದಲ್ಲಿ ಸೋಮವಾರ 6 ಸೀಳು ನಾಯಿಗಳ ಮೃತ ಪತ್ತೆಯಾಗಿತ್ತು. ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ, ಆ ಸ್ಥಳದ ಸುತ್ತಮುತ್ತ ಪರಿಶೀಲಿಸಿದಾಗ 6 ಸೀಳು ನಾಯಿ ಕಳೇಬರ ದೊರೆತಿವೆ. ಸ್ವಲ್ಪ ದೂರದಲ್ಲಿ ಮಂಗಳವಾರ ಮತ್ತೊಂದು ಸೀಳು ನಾಯಿಯ ಮೃತ ದೇಹ ದೊರೆತಿದೆ.

ನಂತರ, ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸೀಳು ನಾಯಿಗಳ ಕಳೇಬರಗಳನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದಾರೆ. ಸದ್ಯ ಈ ಸೀಳು ನಾಯಿಗಳ ಸಾವಿಗೆ ನಿಖರವಾದ ಕಾರಣ ತಿಳಿಯಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net