

ಕೊಳ್ಳೇಗಾಲ; ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಜೂ.13 ಮತ್ತು 14 ರಂದು ನಡೆಯುವ ಶ್ರೀ ಸಿದ್ದಪ್ಪಾಜಿ ಹಾಗೂ ಶ್ರೀ ಮಂಟೇಸ್ವಾಮಿ ಕೊಂಡೋತ್ಸವ ಹಬ್ಬಕ್ಕೆ ಆಗಮಿಸುವಂತೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಗ್ರಾಮಸ್ಥರು ಮಂಗಳವಾರ ಆಹ್ವಾನ ಪತ್ರಿಕೆ ನೀಡಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಿವಾಸದಲ್ಲಿದ್ದ ಶಾಸಕರನ್ನು ಬಸ್ತೀಪುರ ಬಡಾವಣೆಯ ವಿವಿಧ ಕೋಮಿನ ಯಜಮಾನರು ಭೇಟಿ ಮಾಡಿ ಹಾರ, ಶಾಲು ಹಾಕಿ ಸನ್ಮಾನಿಸಿ ಆಹ್ವಾನಿಸಿದರು. ಬಡಾವಣೆಯಲ್ಲಿ ನಡೆಯುವ ಶ್ರೀ ಸಿದ್ದಪ್ಪಾಜಿ ಹಾಗೂ ಶ್ರೀ ಮಂಟೇಸ್ವಾಮಿ ಕೊಂಡೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಿಕೊಡುವಂತೆ ಕೇಳಿಕೊಂಡರು.
ಉಗ್ರಾಣ ನಿಗಮ ಅಧ್ಯಕ್ಷ ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ರವಿ ಬಸ್ತೀಪುರ, ನಗರಸಭೆ ಸದಸ್ಯರಾದ ಬಸ್ತೀಪುರ ಶಾಂತರಾಜು, ಸುರೇಶ್, ಮಾಜಿ ಸದಸ್ಯರಾದ ಪುಟ್ಟೇಗೌಡ, ಶಾಂತರಾಜು, ಪರಿಶಿಷ್ಟ ಜಾತಿ ಜನಾಂಗದ ಮುಖಂಡರಾದ ಪಟ್ಟಮಾದಯ್ಯ, ಸಿದ್ದರಾಜು , ಶಿವಕುಮಾರ್, ಟಿ.ನಂಜಯ್ಯ, ಸೋಮಣ್ಣ, ಮಾದೇಶ, ಮುದ್ದುಮಾದ, ಮಾದೇಶ, ಸಿದ್ದರಾಜು ಬತ್ತಯ್ಯ, ನಾಯಕ ಜನಾಂಗದ ಯಜಮಾನರು ಸಿದ್ದನಾಯಕ, ಗೋವಿಂದನಾಯಕ, ಕುರುಬ ಜನಾಂಗದ ಯಜಮಾನರಾದ ಬೋಳೆಗೌಡ, ಶಿವಣ್ಣ, ಮಲ್ಲಿಕಾರ್ಜುನ, ಪುಟ್ಟೇಗೌಡ ಮತ್ತಿತರಿದ್ದರು.