ಆಷಾಢ ಶುಕ್ರವಾರ ವಿಶೇಷ ಪೂಜೆ

07raju9
Published on

ಚಾಮರಾಜನಗರ: ನಗರದ ಶ್ರೀಕಾಳಿಕಾಂಬ ಕಮಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಷಾಡ ಮಾಸದ ಮೂರನೇ ಶುಕ್ರವಾರದ ಪ್ರಮುಕ್ತ ದೇವಿಗೆ ವಿಶೆಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಶ್ರೀಕಾಳಿಕಾಂಬ ದೇವಸ್ಥಾನವನ್ನು ಹೂವಿನಿಂದ ಆಲಂಕೃತಗೊಳಿಸಲಾಗಿತ್ತು. ಆಷಾಡ ಮಾಸದ ಮೂರನೇ ಶುಕ್ರವಾರದ ಪ್ರಯುಕ್ತ ದೇವಿಗೆ ವಿಶೇಷ ಆಲಂಕಾರ ಮಾಡಿ ವಿಶೇಷ ಹೂವಿಗಳಿಂದ ಶೃಂಗರಿಸಿ, ಪೂಜೆ ಸಲ್ಲಿಸಲಾಯಿತು. ಶ್ರೀಕಾಳಿಕಾಂಬ ಸಮೇತ ಶ್ರೀಕಮಠೇಶ್ವರ ಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪಂಚಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳು ಶ್ರೀರಾಮಶೇಷ ಪಾಠಶಾಲೆಯ ಪ್ರಾಚಾರ್ಯ ಪ್ರದೀಪ್‌ಕುಮಾರ್ ದಿಕ್ಷೀತ್ ನೆರವೇರಿಸಿಕೊಟ್ಟರು.

ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಪಟ್ಟಣ ಅಲ್ಲದೇ ಗ್ರಾಮಾಂತರ ಪ್ರದೇಶಗಳಿಂದ ನೂರಾರು ಮಹಿಳೆಯರು ನಿಂಬೆ ಹಣ್ಣಿನ ದೀಪವನ್ನು ಹಚ್ಚಿ ಇಷ್ಠಾರ್ಥ ಸಿದ್ದಿಗಾಗಿ ಪ್ರಾರ್ಥಿಸಿಕೊಂಡರು. ಜತೆಗೆ ಕುಂಕುಮಾರ್ಚನೆ ಮಾಡಿಸಿದರು. ಭಕ್ತರಿಗೆ ಪ್ರಸಾದವನ್ನು ಟ್ರಸ್ಟ್ ಹಾಗೂ ಭಕ್ತರ ಸಹಕಾರದಿಂದ ನೀಡಲಾಯಿತು. ಸಾಯಂಕಾಲ ಶ್ರೀಕಾಳಿಕಾಂಬ ಸಮೇತ ಶ್ರೀಕಮಠೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ದೇವಸ್ಥಾನದ ಅವರಣದಲ್ಲಿ ನಡೆಯಿತು. ಬೆಳಗಿನಿಂದ ಸಂಜೆಯವರೆಗೆ ಮಹಿಳೆಯರು ದೇವಸ್ಥಾನಕ್ಕೆ ಆಗಮಿಸಿ, ದೇವಿಯ ದರ್ಶನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net