ಆಡಳಿತ ಮಾದರಿ ಯೋಜನೆ ಅಳವಡಿಕೆ ಕಡ್ಡಾಯ

Published on

ಚಾಮರಾಜನಗರ: ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶನದಂತೆ ವಕ್ಫ್ ಕಾಯ್ದೆ 1995 ಹಾಗೂ ಕರ್ನಾಟಕ ವಕ್ಫ್ ನಿಯಮಗಳು 2017ರ ಪ್ರಾವಧಾನಗಳ ಮೇರೆಗೆ ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳು ತಮ್ಮ ಸಂಸ್ಥೆಗಳ ಆಡಳಿತಕ್ಕಾಗಿ ಆಡಳಿತದ ಮಾದರಿ ಯೋಜನೆ ಕಡ್ಡಾಯವಾಗಿರುತ್ತದೆ. ಈಗಾಗಲೇ ಚಾಮರಾಜನಗರ ಜಿಲ್ಲೆಯ ಹಲವಾರು ವಕ್ಫ್ ಸಂಸ್ಥೆ ತಮ್ಮ ಸಂಸ್ಥೆಯ ಆಡಳಿತಕ್ಕಾಗಿ ಅನುಮೋದನೆಯನ್ನು ಪಡೆದಿದ್ದು, ಇನ್ನೂ ಹಲವು ವಕ್ಫ್ ಸಂಸ್ಥೆಗಳು ಸದರಿ ಆಡಳಿತ ಮಾದರಿ ಯೋಜನೆಯನ್ನು ಅಳವಡಿಸಿಕೊಳ್ಳುವುದು ಬಾಕಿ ಇರುತ್ತದೆ.

ಅಂತಹ ವಕ್ಫ್ ಸಂಸ್ಥೆಗಳು ಕಾಯ್ದೆ ಹಾಗೂ ನಿಯಮಗಳ ಪ್ರಾವಧಾನಗಳ ಅಡಿಯಲ್ಲಿ ತಮ್ಮ ಸಂಸ್ಥೆಗಳ ಆಡಳಿತಕ್ಕಾಗಿ ಅಳವಡಿಸಿಕೊಂಡು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು ಅವರ ಅನುಮೋದನೆ ಪಡೆಯಲು ವಕ್ಫ್ ಅಧಿಕಾರಿಗಳು, ನಗರದ ಗುಂಡ್ಲುಪೇಟೆ ರಸ್ತೆಯ ಮೌಲಾನಾ ಆಜಾದ್ ಹಾಸ್ಟೆಲ್ ಆವರಣದಲ್ಲಿರುವ ಜಿಲ್ಲಾ ವಕ್ಫ್ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ 15 ದಿನಗಳ ಒಳಗಾಗಿ ಪ್ರಸ್ತಾವನೆಯನ್ನು ತಪ್ಪದೆ ಸಲ್ಲಿಸಬೇಕು.
ನಿಗದಿತ ಸಮಯದಲ್ಲಿ ಪ್ರಸ್ತಾವನೆ ಸಲ್ಲಿಸದ ವಕ್ಫ್ ಸಂಸ್ಥೆಗಳ ಪದಾಧಿಕಾರಿಗಳ ವಿರುದ್ಧ ವಕ್ಫ್ ಕಾಯ್ದೆ ಹಾಗೂ ವಕ್ಫ್ ನಿಯಮಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ವರದಿ ಮಾಡಲಾಗುವುದು ಎಂದು ಜಿಲ್ಲಾ ವಕ್ಫ್ ಕಚೇರಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net