ಹುಲಿಗೆ ಬಲಿಯಾದ ಮಹಿಳೆ ಕುಟುಂಬಕ್ಕೆ ಪರಿಹಾರ ವಿತರಣೆ

Published on

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ದಾಳಿಯಿಂದ ಸಾವಿಗೀಡಾದ ಮಹಿಳೆಯ ವಾರಸುದಾರರಿಗೆ ಅರಣ್ಯ ಇಲಾಖೆ ಪರಿಹಾರದ ಚೆಕ್ ವಿತರಣೆ ಮಾಡಿದೆ.

ಹುಲಿ ಯೋಜನೆಯ ಎನ್ ಬೇಗೂರು ವಲಯದ ಕಾಡಂಚಿನ ಮಾಳದ ಹಾಡಿಯ ದನಗಾಹಿ ಚಿಕ್ಕಿ(48)ಎಂಬ ಮಹಿಳೆಯನ್ನು ಶನಿವಾರ ಸಂಜೆ ಹುಲಿ ಕಾಡಿಗೆ ಕೊಚ್ಚಿಕೊಂಡು ಹೋಗಿತ್ತು. ಈ ಬಗ್ಗೆ ಭಾನುವಾರ ಹುಡುಕಾಟ ನಡೆಸಿದ ಅರಣ್ಯ ಇಲಾಖೆಯ ಆಕೆಯ ಕಳೇಬರವನ್ನು ಪತ್ತೆ ಹಚ್ಚಿ ಮರಣೋತ್ತರ ಪರೀಕ್ಷೆಗೆ ಹೆಗ್ಗಡದೇವನಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ಕಳಿಸಿತು.

ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಮೃತರ ಮಕ್ಕಳಾದ ಮಹದೇವ ಹಾಗೂ ರಾಧಿಕಾ ಅವರಿಗೆ 3 ಲಕ್ಷ ರೂಪಾಯಿಗಳ ಚೆಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಹುಣಸೂರು ಡಿವೈಎಸ್ ಪಿ ಗೋಪಾಲಕೃಷ್ಣ, ಹೆಗ್ಗಡದೇವನಕೋಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ, ಸಬ್ ಇನ್ಸ್ ಪೆಕ್ಟರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net