ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

07raju6
Published on

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 14ನೇ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಗೆ ವಿಶೇಷ ಕೊಡುಗೆಗಳು ಸಿಗದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ತಮಿಳುನಾಡು-ಕೇರಳ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ಅನುದಾನ ೋಷಣೆ ಮಾಡಬಹುದೆಂಬ ನಿರೀಕ್ಷೆ ಇತ್ತು. ಪಕ್ಕದ ಊರಿನವರೇ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಜಿಲ್ಲೆಗೆ ಮೇಲೆ ಕಾಳಜಿ ಇದೆ. ಮೈಸೂರಿನಿಂದ ಪ್ರತ್ಯೇಕಗೊಂಡು ಚಾಮರಾಜನಗರ ಸ್ವತಂತ್ರ ಜಿಲ್ಲೆಯಾದಾಗ ಸಿದ್ದರಾಮಯ್ಯ ಅವರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಅವರಿಗೆ ಆಪ್ತರು. ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು, ಬಜೆಟ್‌ನಲ್ಲಿ ಇದರ ಪ್ರತಿಲ ದೊರೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ವಸಹಾತುವನ್ನು ಹಂತ ಹಂತವಾಗಿ ವಿಸ್ತರಿಸುವುದು, ಇ-ಆಡಳಿತದಲ್ಲಿ ್ರೂಟ್ಸ್, ಕುಟುಂಬ, ಜಿಐಎಸ್ ತಂತ್ರಜ್ಞಾನ ಬಳಸಿಕೊಂಡು ತಾಲೂಕು ಕಚೇರಿಗಳಲ್ಲಿ ತಕ್ಷಣವೇ ಸೇವೆ ನೀಡಲು ಪ್ರಾಯೋಗಿಕವಾಗಿ ಚಾಮರಾಜನಗರವನ್ನು ಆಯ್ಕೆ ಮಾಡಿಕೊಂಡಿರುವುದಷ್ಟೇ ಸಿಕ್ಕಿರುವ ಭಾಗ್ಯ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ರೈತರ ಪಾಲಿಗೆ ನಿರಾಶಾದಾಯಕ
ಈ ಬಾರಿಯ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಆಗಬೇಕಾಗಿತ್ತು. ತೆಲಂಗಾಣ ಮಾದರಿಯಲ್ಲಿ ವೈಯಕ್ತಿಕ ಜೀವ ವಿಮೆ 5 ಲಕ್ಷ ರೂ.ವರೆಗೆ ನಿಗದಿಪಡಿಸಬೇಕಾಗಿತ್ತು. ಕೃಷಿ ಯಂತ್ರೋಪಕರಣಗಳ ಮೇಲೆ ಹಾಕಿರುವ ಜಿಎಸ್‌ಟಿಯನ್ನು ತೆಗೆಯಬೇಕಾಗಿತ್ತು. ರಸ ಗೊಬ್ಬರದ ಬೆಲೆಯನ್ನು ಇಳಿಕೆ ಮಾಡಬೇಕಾಗಿತ್ತು. ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾದರೆ ಹೆಚ್ಚಿನ ಪರಿಹಾರವನ್ನು ನಿಗದಿ ಮಾಡಬೇಕಾಗಿತ್ತು. ತಾಲೂಕಿಗೊಂದು ಕೋಲ್ಡ್ ಸ್ಟೋರೇಜ್ ನೀಡಲಾಗುವ ನಿರ್ಣಯ ಮತ್ತು ಎಪಿಎಂಸಿ ಕಾಯ್ದೆ ರದ್ದುಪಡಿಸಿರುವುದು ಆಶಾದಾಯಕವಾಗಿದ್ದು ಬಿಟ್ಟರೆ ರೈತರ ಪಾಲಿಗೆ ನಿರಾಶಾದಾಯಕವಾಗಿದೆ.
-ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಾರ್ಯಾಧ್ಯಕ್ಷ, ಕಬ್ಬು ಬೆಳೆಗಾರರ ಸಂಘ, ಚಾಮರಾಜನಗರ

ಗ್ಯಾರಂಟಿಗೆ ಒತ್ತು ನೀಡಲಾಗಿದೆ
ಜಿಲ್ಲೆಯ ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಎಪಿಎಂಸಿ, ಕೃಷಿ ಕಾಯ್ದೆ ರದ್ದು ಮಾಡುವ ಹಾಗೂ ಕೃಷಿ ನವೋದ್ಯಮ ಯೋಜನೆ ಜಾರಿಗೊಳಿಸುವ ಮೂಲಕ ರೈತರ ಪಾಲಿಗೆ ಸರ್ಕಾರ ಸಂಜೀವಿನಿಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಮಾದರಿ ಬಜೆಟ್ ನೀಡಿದ್ದಾರೆ. ನೀರೀಕ್ಷೆಯಂತೆ ಗ್ಯಾರಂಟಿ ಯೋಜನೆಗಳಿಗೆ ಒತ್ತು ನೀಡುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬುದನ್ನು ಸಾಧಿಸಿ ತೋರಿಸಿದೆ.
-ಸೈಯದ್ ಮುಸೈಬ್, ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ, ಚಾಮರಾಜನಗರ

ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ರಾಜ್ಯದಲ್ಲಿರುವ ಮಧ್ಯಮ ವರ್ಗ, ಕೂಲಿ ಕಾರ್ಮಿಕರು, ಮಹಿಳೆಯರು ಹಾಗೂ ಬಡವರ ಪರವಾದ ಬಜೆಟ್ ಇದಾಗಿದೆ. ಚಾಮರಾಜನಗರದ ವಿಶ್ವವಿದ್ಯಾಲಯಕ್ಕೆ ಅನುದಾನ ಮುಂದುವರಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವುದು ಉತ್ತಮ ನಡೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಮಗ್ರ ಅಭಿವೃದ್ಧಿ ಪರ ಆಯವ್ಯಯ ಇದಾಗಿದೆ.
-ದೇವರಾಜ್, ರಾಜ್ಯಶಾಸ ಪ್ರಾಧ್ಯಾಪಕ, ಪ್ರಥಮದರ್ಜೆ ಕಾಲೇಜು, ಚಾಮರಾಜನಗರ

ಕಾಂಗ್ರೆಸ್ ಶಾಸಕರು ವಿಲ
ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಸತತ 3 ಬಾರಿ ಗೆದ್ದಿರುವ ಶಾಸಕ ಪುಟ್ಟರಂಗಶೆಟ್ಟಿ ಜಿಲ್ಲಾ ಕೇಂದ್ರಕ್ಕೆ ವಿಶೇಷ ಅನುದಾನವನ್ನು ತರುವಲ್ಲಿ ವಿಲರಾಗಿದ್ದಾರೆ. ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ವಿಶೇಷ ಅನುದಾನ ತರುವಲ್ಲಿ ಕಾಂಗ್ರೆಸ್ ಶಾಸಕರು ವಿಲರಾಗಿದ್ದಾರೆ. ಈ ಬಾರಿಯ ಬಜೆಟ್ ಜಿಲ್ಲೆಯ ಪಾಲಿಗೆ ನಿರಾಶಾದಾಯಕವಾಗಿದೆ.
-ಸಿ.ಎಂ.ಕೃಷ್ಣಮೂರ್ತಿ, ಹೋರಾಟಗಾರ, ಚಾಮರಾಜನಗರ

ಮೂಲಸೌಕರ್ಯಕ್ಕೆ ಒತ್ತು ನೀಡಿಲ್ಲ
ಗ್ಯಾರಂಟಿಗಳನ್ನು ಪ್ರೋತ್ಸಾಹಿಸಲು ಮಾತ್ರ ಬಜೆಟ್ ಸೀಮಿತವಾಗಿದೆ. ಅನುಪಯುಕ್ತ ಯೋಜನೆಗಳಿಗೆ ಅನುದಾನ ವೆಚ್ಚ ಮಾಡುವುದರ ಮೂಲಕ ಮೂಲಸೌಲಭ್ಯಗಳಿಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಅಭಿವೃದ್ಧಿಯ ಒತ್ತಾಸೆಗೆ ಪೂರಕವಾಗಿ ಇಲ್ಲದಿರುವುದು ಹಾಗೂ ಉತ್ಪಾದನೆಯತ್ತ ಗಮನ ನೀಡದಿರುವುದು ಬಜೆಟ್‌ನ ದೌರ್ಭಾಗ್ಯವಾಗಿದೆ. ರೈತರಿಗೆ ಶೂನ್ಯ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ನೀಡುವುದಾಗಿ ತಿಳಿಸಲಾಗಿದೆ. ಸಾಲ ನೀಡುವ ಗ್ರಾಮೀಣ ಪ್ರದೇಶದಲ್ಲಿರುವ ಕೋ-ಆಪರೇಟಿವ್ ಸೊಸೈಟಿಗಳು ನಷ್ಟದಲ್ಲಿವೆ. ಜಿಲ್ಲೆಗೆ ಯಾವುದೇ ಆದ್ಯತೆ ನೀಡಲಾಗಿಲ್ಲ. ಒಟ್ಟಾರೆ ಈ ಬಜೆಟ್ ನಿರಾಶದಾಯಕವಾಗಿದೆ.
-ಅಮ್ಮನಪುರ ಮಲ್ಲೇಶ್, ಬಿಜೆಪಿ ಹಾಗೂ ರೈತ ಮುಖಂಡ, ಚಾಮರಾಜನಗರ

ಹೊಸ ಬಾಟಲಿಯಲ್ಲಿ ಹಳೆಯ ಮದ್ಯ
ಈ ಬಾರಿಯ ಬಜೆಟ್‌ನಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳನ್ನು ಜನಪ್ರಿಯಗೊಳಿಸುವ ಮೂಲಕ ಜನರನ್ನು ಆಕರ್ಷಿಸಿದೆ. ಹಳೆಯ ಮದ್ಯವನ್ನು ಹೊಸ ಬಾಟಲಿ ಮೂಲಕ ನೀಡಿದ್ದಾರೆ. ಚಾಮರಾಜನಗರ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕಾಲೇಜಿಗೆ ವಿಶೇಷ ಪ್ಯಾಕೇಜ್ ನೀಡಬಹುದಾಗಿತ್ತು. ಆದರೆ ಸಿದ್ದರಾಮಯ್ಯ ತಮ್ಮ ಚುನಾವಣಾ ಪ್ರಾಣಾಳಿಕೆಯನ್ನು ಸಾಕಾರಗೊಳಿಸಲು ಈ ಆಯವ್ಯಯ ಮಂಡಿಸಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡದಿರುವುದು ಬೇಸರ ಮೂಡಿಸಿದೆ. ಕೆಲವೊಂದು ಕ್ಷೇತ್ರಗಳಿಗೆ ಗಮನ ನೀಡಿರುವುದನ್ನು ಬಿಟ್ಟರೆ ಒಟ್ಟಾರೆ ಬಜೆಟ್ ನಿರಾಶಾದಾಯಕವಾಗಿದೆ.
-ಮಲ್ಲಿಕಾರ್ಜುನಸ್ವಾಮಿ, ಅರ್ಥಶಾಸ ಅಧ್ಯಾಪಕ, ಚಾಮರಾಜನಗರ ವಿಶ್ವವಿದ್ಯಾಲಯ

ಸಂಪನ್ಮೂಲ ಕ್ರೋಡೀಕರಣದ ಮಾಹಿತಿ ಇಲ್ಲ
ತಾವೇ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸ್ಪಷ್ಟತೆ ನೀಡಿಲ್ಲ. ಆರ್ಥಿಕ ಸಂಪನ್ಮೂಲದ ಕ್ರೋಡೀಕರಣದ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸಿಲ್ಲ. ಉದ್ಯಮ ಹಾಗೂ ಕೃಷಿ ಕ್ಷೇತ್ರಕ್ಕೆ ಈ ಆಯವ್ಯಯದಲ್ಲಿ ಆದ್ಯತೆ ನೀಡಲಾಗಿಲ್ಲ. ನಿರುದ್ಯೋಗ ನಿವಾರಣೆಗೆ ಯಾವುದೇ ಭರವಸೆ ನೀಡಿಲ್ಲ. ಶಿಕ್ಷಣ ಕ್ಷೇತ್ರವನ್ನು ದಿಕ್ಕು ತಪ್ಪಿಸುವ, ಜನವಿರೋಧಿ ಹಾಗೂ ರಾಜ್ಯದ ಅಭಿವೃದ್ಧಿ ವಿರೋಧಿ ಬಜೆಟ್ ಇದಾಗಿದೆ. ಜಿಲ್ಲೆಯ ದೃಷ್ಟಿಯಲ್ಲಿ ಶೂನ್ಯ ಬಜೆಟ್ ಇದಾಗಿದ್ದು, ವಿಶೇಷ ಅನುದಾನ ನೀಡುವಲ್ಲಿ ಕಾಂಗ್ರೆಸ್ ವಿಲವಾಗಿದೆ.
-ನಂದೀಶ್ ಮೂಡ್ಲುಪುರ ಬಿಜೆಪಿ ಮುಖಂಡ, ಚಾಮರಾಜನಗರ

ಎಪಿಎಂಸಿ ಕಾಯ್ದೆ ರದ್ದು ಒಳ್ಳೆಯ ಬೆಳವಣಿಗೆ
ಈ ಬಾರಿಯ ಬಜೆಟ್ ರೈತರು, ಬಡವರು ಹಾಗೂ ಮಹಿಳೆಯರ ಪರವಾಗಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿರುವುದು ಉತ್ತಮ ಬೆಳವಣಿಗೆ. ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಎಪಿಎಂಸಿ ಕಾಯ್ದೆ ರದ್ದು ಮಾಡಿರುವುದು ರೈತರಿಗೆ ಬಲ ತುಂಬಿದೆ. ದಲಿತರ ಪಾಲಿಗೆ ಮಾರಕವಾಗಿದ್ದ ಎಸಿಪಿ/ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7ಡಿ ರದ್ದು ಮಾಡಿರುವುದು ಸಂತಸದ ವಿಷಯವಾಗಿದೆ. ಹಿಂದಿನ ಸರ್ಕಾರ ಮಾಡಿದ್ದ ಹಲವು ಜನವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವ ಮೂಲಕ ಜನಪರವಾದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ.
-ಪ್ರದೀಪ್ ಆಲೂರು, ಎಪಿಎಂಸಿ ನಿರ್ದೇಶಕ, ಚಾಮರಾಜನಗರ

ಅಹಿಂದ ಪರವಾದ ಬಜೆಟ್
ಹಲವು ಟೀಕೆ-ಟಿಪ್ಪಣಿಗಳ ನಡುವೆ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಬದ್ಧತೆಯಿಂದ ಸರ್ಕಾರ ನಡೆದುಕೊಂಡಿದೆ. ರೈತರು, ಮಹಿಳೆಯರು, ಎಸ್ಸಿ/ಎಸ್ಟಿ, ಹಿಂದುಳಿದ ಸಮುದಾಯದ ಕಾಳಜಿಯನ್ನು ಗುರಿಯಾಗಿರಿಸಿಕೊಂಡು ಬಜೆಟ್ ಮಂಡಿಸಲಾಗಿದೆ. ಈ ಕಾರಣಕ್ಕೆ ಅಹಿಂದ ವರ್ಗಗಳ ಪರವಾಗಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಬೇಕು. ಎಸ್ಸಿ/ಎಸ್ಟಿ ಸಮುದಾಯದ ವಯಸ್ಸಾದವರಿಗೆ ವೃದ್ಧಾಶ್ರಮ ತೆರೆಯುತ್ತೇವೆ ಎನ್ನುವುದನ್ನು ಪರಿಶೀಲಿಸುವ ಅಗತ್ಯವಿದೆ. ಇದು ತಳಸಮುದಾಯಕ್ಕೆ ಬೇರೆಯದೇ ಸಂದೇಶ ರವಾನಿಸುತ್ತದೆ. ಇದನ್ನು ಎಲ್ಲ ಸಮುದಾಯಗಳಿಗೂ ವಿಸ್ತರಿಸಿದರೆ ಉತ್ತಮ.
-ಮಹದೇವ ಶಂಕನಪುರ, ಹಿರಿಯ ಸಾಹಿತಿ, ಚಾಮರಾಜನಗರ

ಪ್ರೋತ್ಸಾಹಧನ ಹೆಚ್ಚಳ ಕಾರ್ಯರೂಪಕ್ಕೆ ಬರಲಿ
ಈ ಬಾರಿಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ರೂ. ಪ್ರೋತ್ಸಾಹಧನ ಹೆಚ್ಚಳ ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಅದು ಬಜೆಟ್ ಪುಸ್ತಕದಲ್ಲಿ ಉಳಿಯದೇ ಕಾರ್ಯರೂಪಕ್ಕೆ ತರಬೇಕಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಒತ್ತು ನೀಡಿರುವುದು ಉತ್ತಮ ನಡೆ. ಬಡವರ ಪರವಾದ ಬಜೆಟ್ ಇದಾಗಿದ್ದು, ಎಲ್ಲ ಸಮುದಾಯಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಹಿತದೃಷ್ಟಿಯಿಂದ ವಿಶೇಷ ಅನುದಾನ ನೀಡದಿರುವುದು ಬೇಸರವನ್ನು ಉಂಟುಮಾಡಿದೆ.
-ಕವಿತಾ, ಜಿಲ್ಲಾಧ್ಯಕ್ಷೆ, ಆಶಾ ಕಾರ್ಯಕರ್ತೆಯರ ಸಂಘ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net