ಮಳೆಯಿಂದ ದೇವಾಲಯದ ಗೋಡೆ ಕುಸಿತ

336064d4-8062-45a7-b4ad-0ebb403e2253
Published on

ಚಾಮರಾಜನಗರ ; ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಆವಾಂತರಗಳು ದಾಖಲಾಗುತ್ತಿದ್ದು, ಮಳೆಯಿಂದಾಗಿ ದೇವಾಲಯದ ಗೋಡೆ ಕುಸಿದಿದೆ.

ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ದಿವ್ಯಲಿಂಗೇಶ್ವರ ದೇವಾಲಯದ ಬಲಭಾಗದಲ್ಲಿರುವ ಗೋಡೆ ಸತತ ಮಳೆಯಿಂದಾಗಿ ಭಾನುವಾರ ಬೆಳಿಗ್ಗೆ ಕುಸಿದೆ. ಕಳೆದ ಒಂದು ವಾರಗಳಿಂದ ನಿರಂತರವಾಗಿ ಹರದನಹಳ್ಳಿ ಹೋಬಳಿಯಾದ್ಯಂತ ಮಳೆಯಾಗುತ್ತಿದೆ. ಶ್ರೀ ದಿವ್ಯಲಿಂಗೇಶ್ವರ ದೇವಾಲಯ ಪುರಾತನ ದೇವಾಲಯವಾಗಿದ್ದು, ಸತತ ಮಳೆಯಿಂದಾಗಿ ಗೋಡೆಗಳು ತೇವಗೊಂಡಿದ್ದವು. ಬೃಹತ್ ಕಲ್ಲುಗಳನ್ನು ಬಳಸಿ ಗೋಡೆಯನ್ನು ನಿರ್ಮಾಣ ಮಾಡಿರುವುದರಿಂದ ಗೋಡೆ ಭಾರವನ್ನು ತಡೆಯಲಾರದೇ ಮಳೆಗೆ ಕುಸಿದಿದೆ. ಗೋಡೆ ಕುಸಿಯುವ ಸಂದರ್ಭದಲ್ಲಿ ಸ್ಥಳದಲ್ಲಿ ಯಾರು ಇಲ್ಲದ ಪರಿಣಾಮವಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಕುಸಿದಿರುವ ಗೋಡೆ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net