

ಗುಂಡ್ಲುಪೇಟೆ: ತಾಲೂಕಿನ ಪರಮಾಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿದೆ.
ಭಾನುವಾರ ಗ್ರಾಮದ ಶಿವಲಿಂಗಪ್ಪ ಅವರ ಗದ್ದೆಯಲ್ಲಿ ಕಾರ್ಮಿಕರು ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿತು. ಈ ಬಗ್ಗೆ ವಿಷಯ ತಿಳಿದ ಬಫರ್ ವಲಯದ ಅರಣ್ಯ ಸಿಬ್ಬಂದಿ ಚಿರತೆಯ ಸೆರೆಗೆ ಬೋನು ಅಳವಡಿಸಿದ್ದಾರೆ. ಬಹುಶಃ ಕಬ್ಬಿನ ಗದ್ದೆಯಲ್ಲಿ ಮರಿ ಹಾಕಿರಬಹುದು. ಆದ್ದರಿಂದ ಕಾರ್ಮಿಕರು ಹಾಗೂ ಸಾರ್ವಜನಿಕರು ಸ್ವಲ್ಪ ದಿನ ಅತ್ತ ಸುಳಿಯದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.