

ಹನೂರು; ತಾಲೂಕಿನ ಮಂಗಲ ಗ್ರಾಮದ ಮುಖ್ಯ ರಸ್ತೆಯಲ್ಲಿ ಶನಿವಾರ ಸಂಜೆ ಬೈಕ್ ಹಾಗೂ ಸೈಕಲ್ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ.
ತಾಲೂಕಿನ ಕಣ್ಣೂರು ಗ್ರಾಮದ ಲಿಂಗಣ್ಣ (70) ಹಾಗೂ ಮಂಡ್ಯ ಜಿಲ್ಲೆಯ ಅಳವಾಡಿ ಗ್ರಾಮದ ಶ್ರೀನಿವಾಸ್ (40), ದೀಪಕ್ (39) ಗಾಯಗೊಂಡವರು. ಮಂಡ್ಯ ಮೂಲದ ಶ್ರೀನಿವಾಸ್ ಹಾಗೂ ದೀಪಕ್ ಸಂಜೆ 7 ಗಂಟೆಯಲ್ಲಿ ಮಹದೇಶ್ವರಬೆಟ್ಟಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇತ್ತ ಕಣ್ಣೂರು ಗ್ರಾಮದಿಂದ ಲಿಂಗಣ್ಣ ಅವರು ಸೈಕಲ್‌ನಲ್ಲಿ ಮಂಗಲಕ್ಕೆ ಆಗಮಿಸಿದ್ದು, ಮುಖ್ಯ ರಸ್ತೆಯ ಬಸ್ ನಿಲ್ದಾಣದ ಬಳಿ ತೆರಳುತ್ತಿದ್ದಾಗ ಸೈಕಲ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಮೂವರಿಗೂ ಮುಖ ಭಾಗಕ್ಕೆ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ನೆರವಿಗೆ ಧಾವಿಸಿದ ಗ್ರಾಮಸ್ಥರು ತುರ್ತು ವಾಹನದ ಮೂಲಕ ಸಮೀಪದ ಆಸ್ಪತ್ರೆಗೆ ಕಳುಹಿಸಿ ಕೊಟ್ಟರು. ಹನೂರು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.