3 ದಿನಗಳ ಆನೆ ಗಣತಿ ಮುಕ್ತಾಯ

25-GPT-3
Published on

ಗುಂಡ್ಲುಪೇಟೆ: ಬಂಡೀಪುರದಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಮೂರನೇ ದಿನದ ಆನೆ ಗಣತಿ ಶನಿವಾರ ಪೂರ್ಣಗೊಂಡಿದೆ. ಭಾರೀ ಮಳೆಯ ನಡುವೆಯೂ ಹುಲಿ ಸಂರಕ್ಷಿತ ಪ್ರದೇಶದ ಎಲ್ಲ 13 ವಲಯಗಳ 113 ಬೀಟುಗಳಲ್ಲಿ ಕಳೆದ ಎರಡು ದಿನಗಳಿಂದ ಗಣತಿ ನಡೆಸಲಾಗಿದೆ.

ಗುರುವಾರ ಮೊದಲ ದಿನ ಕಾಲ್ನಡಿಗೆಯಲ್ಲಿ ಸಾಗಿದ ಸಿಬ್ಬಂದಿ ತಮಗೆ ಕಂಡು ಬಂದ ಆನೆಗಳ ಲಿಂಗ, ವಯಸ್ಸು, ದಂತ ಹಾಗೂ ದಂತ ರಹಿತ ಆನೆಗಳ ಸಂಖ್ಯೆ ದಾಖಲಿಸಿದ್ದರು. ಎರಡನೇ ದಿನ ಆನೆಗಳ ಲದ್ದಿ ಆಧಾರದ ಮೇಲೆ ಹಾಗೂ ಮೂರನೇ ಹಾಗೂ ಅಂತಿಮ ದಿನವಾದ ಶನಿವಾರ ಕೆರೆಕಟ್ಟೆಗಳು ಹಾಗೂ ನೀರಿನ ಮೂಲಗಳ ಸಮೀಪ ಕಂಡುಬಂದ ಆನೆಗಳ ಗಣತಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net