ಕೆರೆಕಟ್ಟೆಯ ಬಳಿ ಆನೆಗಾಗಿ ಕಾದು ಕುಳಿತ ಸಿಬ್ಬಂದಿ

Oplus_0
Oplus_0
Published on

ಯಳಂದೂರು: ಆನೆ ಎಣಿಕೆಯ ಕೊನೆಯ ದಿನವಾದ ಶನಿವಾರ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕೆರೆಕಟ್ಟೆಯ ಬಳಿ ಕುಡಿಯುವ ನೀರನ್ನರಸಿ ಬರುವ ಆನೆಗಳ ಬರುವಿಕೆಗಾಗಿ ಅರಣ್ಯ ಸಿಬ್ಬಂದಿ ಕಾದು ಗಣತಿಯನ್ನು ಮುಗಿಸಿದರು.

ಡೆಮೊಗ್ರಫಿ ಎಂದು ಕರೆಯಲ್ಪಡುವ ಕೊನೆಯ ದಿನದ ಈ ಪ್ರಕ್ರಿಯೆಯಲ್ಲಿ ಪ್ರತಿ ಬೀಟ್‌ನಲ್ಲೂ ಒಂದು ಅಥವಾ ಎರಡು ಕೆರೆಗಳನ್ನು ಗುರುತಿಸಲಾಗಿತ್ತು. ಇದರ ಬಳಿ ಆನೆಯ ಬರುವಿಕೆಯನ್ನು ಕಾದು ಕುಳಿತು ಅವು ಬಂದ ಮೇಲೆ ಇಲ್ಲಿ ಬರುವ ಆನೆಗಳಲ್ಲಿ ಹೆಣ್ಣು, ಗಂಡು ಹಾಗೂ ಮರಿಯಾನೆ ಎಷ್ಟು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಮೊದಲನೇ ದಿನ ಎಲ್ಲ ಆನೆಗಳನ್ನು ಗಣತಿ ಮಾಡಿ ಮಾಹಿತಿ ಕಲೆ ಹಾಕಿದರೆ, ಎರಡನೇ ದಿನ ಆನೆ ಲದ್ದಿಯನ್ನು ಗುರುತಿಸುವ ಪ್ರಕ್ರಿಯೆ ನಡೆದು ಗಣತಿ ನಡೆಸಿದ್ದರು. ಮೂರನೇ ದಿನ ಕರೆ ಬಳಿಬರುವ ಆನೆಗಳ ಗಣತಿಯ ಜತೆಗೆ ಲಿಂಗವನ್ನು ಗುರುತಿಸುವ ಕೆಲಸವನ್ನು ಮಾಡಲಾಯಿತು.

ಈಗಾಗಲೇ ಆನೆ ಹೆಚ್ಚಾಗಿ ಹಾಗೂ ನಿರಂತರವಾಗಿ ಬರುವ ಕೆರೆಕಟ್ಟೆಗಳನ್ನು ಗುರುತಿಸಲಾಗಿತ್ತು. 6 ವಲಯಗಳಲ್ಲಿ 70 ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಕೆರೆಕಟ್ಟೆಯ ಸಮೀಪದಲ್ಲೇ ಕುಳಿತು ಆನೆಗಳನ್ನು ಗುರುತಿಸುವ ಕೆಲಸವನ್ನು ನಿರ್ವಹಿಸಿದ್ದಾರೆ ಎಂದು ಕೆ. ಗುಡಿ ವಲಯದ ಆರ್‌ಎಫ್‌ಒ ವಿನೋದ್‌ಗೌಡ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net