ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಪಾತ್ರ ಅಮೂಲ್ಯ

26rajesh4
Published on

ಚಾಮರಾಜನಗರ: ತಾಯಿ ಎನ್ನುವ ಪದ ಬಹಳ ಶ್ರೇಷ್ಟವಾದದು, ಮಕ್ಕಳ ಬೆಳವಣಿಗೆಗೆ ತಾಯಿಯ ಪಾತ್ರ ಅಮೂಲ್ಯವಾದದು ಎಂದು ಬ್ರಾಹ್ಮೀ ಮಹಿಳಾ ಸಂಘದ ಕಾರ್ಯದರ್ಶಿ ಲಕ್ಷ್ಮಿವಾಸುದೇವರಾವ್ ತಿಳಿಸಿದರು.

ನಗರದ ಶಂಕರಪುರ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಬ್ರಾಹ್ಮೀ ಮಹಿಳಾ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಮಾತೃ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ತಾಯಿಯಂದಿರನ್ನು ಸನ್ಮಾನಿಸಿ ಅವರು ಮಾತನಾಡಿದರು.

ತಾಯಿಯು ಪ್ರತಿಯೊಬ್ಬರಿಗೂ ದೇವರ ಸಮಾನರು ಅವರನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳ ಏಳಿಗೆಗೆ ತಾಯಿಯು ಸಾಕಷ್ಟು ಶ್ರಮ ಪಡುತ್ತಾರೆ. ಅವರನ್ನು ಕಾಪಾಡುವ ಜವಬ್ದಾರಿ ನಮ್ಮದಾಗಿದೆ ಎಂದರು.

ಸಂಘದ ಗೌರವ ಅಧ್ಯಕ್ಷೆ ವತ್ಸಲಾ ರಾಜಗೋಪಾಲ್ ಮಾತನಾಡಿ, ಪ್ರತಿವರ್ಷವು ನಮ್ಮ ಸಂಘದ ವತಿಯಿಂದ ಹಿರಿಯ ತಾಯಂದಿರನ್ನು ಗೌರವಿಸುತ್ತ ಬಂದಿದ್ದೇವೆ. ಇದರ ಉದ್ದೇಶ ಹಿರಿಯರನ್ನು ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಬಿಡುವ ಬದಲು ಮಕ್ಕಳು ತಮ್ಮ ಮನೆಯಲ್ಲಿಯೇ ಇರಲು ಬಿಟ್ಟರೆ ಮಕ್ಕಳು, ಮೊಮ್ಮಕಳ ತೆಯಲ್ಲಿ ಸಂತೋಷದಿಂದ ಇರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಭಾನುಮತಿ,ರಾಧಾಶೇಷಚಲ, ರಮ್ಯಶ್ರೀಧರ್, ಉಮಾಹೆಗ್ಡೆ, ಪಾರ್ವತಿ ಸುದರ್ಶನ್, ರೇಖಾ, ಲಲಿತಾಂಭ, ವಿಜಯ, ಸರೋಜಮ್ಮ, ನಾಗರತ್ನ, ನಂದಿನಿ, ಸವಿತ, ಶೋಭಸತ್ಯ, ಹಾಗೂ ರಾಯರ ಮಠದ ಪವನಚಾರ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net