ಹೇರ್‌ಕಲರಿಂಗ್‌ಗೆ ಉತ್ತಮ ಸ್ಪಂದನೆ

25rajesh4
Published on

ಚಾಮರಾಜನಗರ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಮೇ.25 ರಿಂದ 5 ದಿನಗಳ ಕಾಲ ಚಾಮರಾಜನಗರದಲ್ಲಿ ಆಯೋಜಿಸಿರುವ ಉಚಿತ ಹೇರ್ ಕಲರಿಂಗ್ ಮಾಡುವ ಗಾರ್ನಿಯರ್ ಅಭಿಯಾನಕ್ಕೆ ಶನಿವಾರ ಚಾಲನೆ ದೊರೆತಿದ್ದು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದ ಸಮೀಪದಲ್ಲಿರುವ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಅಭಿಯಾನದಲ್ಲಿ ಮಹಿಳೆಯರು, ಪುರುಷರು ಹಾಗೂ ಯುವಕ ಮತ್ತು ಯುವತಿಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮಿಚ್ಚೆಯ ಬಣ್ಣಗಳನ್ನು ಕೂದಲಿಗೆ ಹಾಕಿಸಿಕೊಂಡು ಖುಷಿಪಟ್ಟರು. ನಗರಸಭಾ ಸದಸ್ಯರಾದ ಕುಮುದಾ ಕೇಶವಮೂರ್ತಿ, ಮಮತಾ ಬಾಲಸುಬ್ರಮ್ಮಣ್ಯಂ, ಜೆಡಿಎಸ್ ಮುಖಂಡ ಆಲೂರು ಮಲ್ಲು ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಹೋರಾಟಗಾರ ವಾಸು ಹೊಂಡರಬಾಳು, ದೊಡ್ಡರಾಯಪೇಟೆ ಕೃಷ್ಣಮೂರ್ತಿ, ಶಿವಶಂಕರ್ ಚಟ್ಟು ಹಾಗೂ ಇತರರು ಹಾಜರಿದ್ದರು.

ದೇಶದ ಹೆಸರಾಂತ ಹೇರ್ ಕಲರಿಂಗ್ ಕಂಪನಿಯಾದ ಗಾರ್ನಿಯರ್ ಈ ಅಭಿಯಾನಕ್ಕಾಗಿ ವಿಶೇಷ ಮಾದರಿಯ ಸಲೂನ್ ವ್ಯವಸ್ಥೆಗೊಳಿಸಿದ್ದು. ಪುರುಷ, ಮಹಿಳೆಯರು ಪ್ರತ್ಯೇಕ ಪರಿಣಿತರು ವಿವಿಧ ವಿನ್ಯಾಸದ ಹೇರ್ ಕಲರಿಂಗ್ ಮಾಡಿದ್ದು ಅಭಿಯಾನದಲ್ಲಿ ಪಾಲ್ಗೊಂಡಿದ್ದವರನ್ನು ಆಕರ್ಷಿಸಿತು. ಹೇರ್ ಕಲರಿಂಗ್ ಮಾಡಿದ ಸ್ಥಳದಲ್ಲಿಯೇ ಹೇರ್ ಕ್ಲೀನಿಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಉತ್ಸುಕರಾಗಿ ಹೇರ್ ಕಲರಿಂಗ್ ಮಾಡಿಸಿಕೊಳ್ಳಲು ಆಗಮಿಸಿದ್ದ ಮಹಿಳೆಯರು, ಪುರಷರು, ಯುವಕ, ಯುವತಿಯರು ತಮಗೊಪ್ಪಿದ ಕಲರ್‌ಗಳನ್ನು ಹಾಕಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net