

ಚಾಮರಾಜನಗರ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ಗಾರ್ನಿಯರ್ ಸಹಯೋಗದಲ್ಲಿ ಮೇ.25 ರಿಂದ 29 ರವರೆಗೆ ಉಚಿತ ಹೇರ್ ಕಲರಿಂಗ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದ ಸಮೀಪದಲ್ಲಿರುವ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ 5 ದಿನಗಳು ನಡೆಯಲಿರುವ ಅಭಿಯಾನಕ್ಕೆ ಮೇ.25 ರ ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರುಷರು, ಯುವಕ, ಯುವತಿಯರಿಗೆ ತಮ್ಮ ಇಚ್ಛೆಯ ಕಲರ್‌ಗಳನ್ನು ತಲೆಗೂದಲಿಗೆ ಉಚಿತವಾಗಿ ಹಚ್ಚಿಕೊಡಲಾಗುತ್ತದೆ. ಬಿಳಿ ಕೂದಲು ಇರುವವರಿಗೂ ಆದ್ಯತೆ ಇದೆ.
ಈ ಅಭಿಯಾನವು ಈಗಾಗಲೇ ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ಪಟ್ಟಣಗಳಲ್ಲಿ ಯಶಸ್ವಿಯಾಗಿ ನಡೆದಿದ್ದು, ನೂರಾರು ಮಹಿಳೆಯರು ಮತ್ತು ಪುರಷರುತಲೆಯ ಕೂದಲಿಗೆ ನುರಿತ ಬ್ಯೂಟಿಷಿಯನ್‌ಗಳಿಂದ ತಮ್ಮ ಇಚ್ಚೆಯ ಬಣ್ಣ ಹಚ್ಚಿಸಿಕೊಂಡಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ: 9008804191 ಸಂಪರ್ಕಿಸಬಹುದಾಗಿದೆ.