ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ

18rajesh5
Published on

ಚಾಮರಾಜನಗರ : ನಗರದ ಚಿಕ್ಕಂಗಡಿ ಬೀದಿಯಲ್ಲಿರುವ ದಾಸಬಣಜಿಗರ ಸೀತಾ ರಾಮಮಂದಿರದಲ್ಲಿ ಶ್ರೀ ಸೀತಾರಾಮ ಕಲ್ಯಾಣೋತ್ಸವ ಹಾಗೂ ಶ್ರೀ ರಾಮಪಟ್ಟಾಭಿಷೇಕ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಶ್ರೀರಾಮ ಪಟ್ಟಾಭೀಷಕ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮ ನಡೆಯಿತು. ಮೇ.17ರಂದು ಸಂಜೆ ಸೀತಾರಾಮ ಕಲ್ಯಾಣೋತ್ಸವದ ಅಂಗವಾಗಿ ವಿವಿಧ ದೇವತಾ ಕಾರ್ಯಗಳು ನೆರವೇರಿದವು. ಶನಿವಾರ ಬೆಳಿಗ್ಗೆ ನಡೆದ ರಾಮಪಟ್ಟಾಭೀಷೇಕ ಮಹೋತ್ಸವದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು.

ಶ್ರೀರಾಮ ಪಟ್ಟಾಭೀಷೇಕದ ಬಳಿಕ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ ಬಗೆ ಬಗೆಯ ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯ ಮೇಲೆ ಸೀತಾ ರಾಮರ ಭಾವಚಿತ್ರವನ್ನಿರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಹಾದು ಹೋಗುವ ಮಾರ್ಗದಲ್ಲಿ ಯುವಕರು ಪಟಾಕಿಗಳನ್ನು ಸಿಡಿಸಿ, ಕುಣಿದು ಸಂಭ್ರಮಿಸಿದರು. ಮಹಿಳೆಯರು ಸೇರಿದಂತೆ ದಾಸ ಬಣಜಿಗರ ಸಂಘದ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೇ. 19 ರಂದು ಭಾನುವಾರ ಬೆಳಗ್ಗೆ 11 ಕ್ಕೆ ಹನುಮೋತ್ಸವ ನಡೆಯಲಿದ್ದು, ಯುವಕರು ಪರಸ್ಪರ ಬಣ್ಣಗಳನ್ನು ಎರಚಿ, ಓಕಳಿ ಆಡುವ ಮೂಲಕ ಮೂರು ದಿನಗಳ ಕಾಲ ನಡೆಯುವ ಶ್ರೀರಾಮಪಟ್ಟಾಭೀಷೇಕಕ್ಕೆ ತೆರೆಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net