ವಿಜೃಂಭಣೆಯ ಪಟ್ಟಲದಮ್ಮನವರ ಜಾತ್ರಾ ಮಹೋತ್ಸವ

18-GPT-5D
Published on

ಗುಂಡ್ಲುಪೇಟೆ: ಪಟ್ಟಣದಲ್ಲಿ ಶನಿವಾರ ಪಟ್ಟದರಾಣಿ ಪಟ್ಟಲದಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕಳೆದ ಮೂರು ದಿನಗಳಿಂದ ಪಟ್ಟಲದಮ್ಮನವರ ದೇವಾಲಯ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ತಳಿರು, ತೋರಣಗಳಿಂದ ಅಲಂಕರಿಸಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ಅಮ್ಮನವರ ದರ್ಶನ ಪಡೆದು ಕೃತಾರ್ಥರಾದರು.

ಶನಿವಾರ ಮಧ್ಯಾಹ್ನ ದೇವಾಲಯದಿಂದ ಹೊರಟ ಅಮ್ಮನವರ ಉತ್ಸವ ಮೂರ್ತಿಯ ಮೆರವಣಿಗೆ ಮೈಸೂರು ದಸರಾ ನೆನಪಿಸುವಂತಿತ್ತು. ಕೇರಳದ ಚಂಡೆಮದ್ದಳೆ, ಬ್ಯಾಂಡ್, ಗಾರುಡಿಗೊಂಬೆ, ಕರಾವಳಿ ಭಾಗದ ಯಕ್ಷಗಾನ, ದೈವನರ್ತಕರು, ಪೌರಾಣಿಕ ಪಾತ್ರಗಳು ಸೇರಿದಂತೆ ನಾನಾ ವೇಷಧಾರಿಗಳು, ಹುಲಿಕುಣಿತ, ಬ್ಯಾಂಡ್ ವಾದನ, ಮಂಗಳ ವಾದ್ಯಗಳ ಜತೆ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಗೆ ಸಾರ್ವಜನಿಕರು ಮತ್ತು ಅಂಗಡಿಗಳವರು ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net