ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ಯಶಸ್ವಿ

oppo_2
oppo_2
Published on

ಹನೂರು: ಪಟ್ಟಣದ ಕ್ರಿಸ್ತ ರಾಜ ಕಾನ್ವೆಂಟ್ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ಹಾಗೂ ಗಾರ್ನಿಯರ್ ಕಂಪನಿ ವತಿಯಿಂದ 3 ದಿನಗಳ ಕಾಲ ಆಯೋಜಿಸಿದ್ದ ಉಚಿತ ಹೇರ್ ಕಲರಿಂಗ್ ಅಭಿಯಾನವು ಶನಿವಾರ ಯಶಸ್ವಿಯಾಯಿತು.

ಅಭಿಯಾನದಲ್ಲಿ ಕಳೆದ 2 ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೈತ ಸಂಘದ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಮಹಿಳೆಯರು, ಪುರುಷರು ಹಾಗೂ ಯುವಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ, ತಮ್ಮಿಚ್ಛೆಯ ಬಣ್ಣವನ್ನು ಹಾಕಿಸಿಕೊಂಡರು. ಹಾಗೆಯೇ ಶನಿವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಬಣ್ಣವನ್ನು ಹಾಕಿಸಿಕೊಂಡು ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೂಲಕ ಹನೂರಿನಲ್ಲಿ ಆಯೋಜಿಸಿದ್ದ ಅಭಿಯಾನವು ಯಶಸ್ವಿ ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net