

ಹನೂರು: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಹೇರ್ ಕಲರ್ ಕಂಪನಿ ಆಯೋಜಿಸಿದ್ದ ಉಚಿತ ಹೇರ್ ಕಲರ್ ಅಭಿಯಾನಕ್ಕೆ 2ನೇ ದಿನವಾದ ಶುಕ್ರವಾರವೂ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಕಾರ್ಯಕ್ರಮಕ್ಕೆ ತಾಲೂಕು ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ ಚಾಲನೆ ನೀಡಿದರು. ಬೆಳಗ್ಗೆಯಿಂದ 10 ಗಂಟೆಯಿಂದ ಆರಂಭವಾದ ಅಭಿಯಾನ ಸಂಜೆ 5 ರವರೆಗೆ ನಡೆಯಿತು. ರೈತ ಸಂಘದ ಮಹಿಳೆಯರು, ಪುರುಷರು ಹಾಗೂ ಯುವಕರು ತಮ್ಮಿಚ್ಛೆಯ ಬಣ್ಣವನ್ನು ಹಾಕಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಶನಿವಾರವೂ ಇದೇ ಶಾಲೆಯಲ್ಲಿ ಅಭಿಯಾನ ಮುಂದುವರಿಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.