

ಚಾಮರಾಜನಗರ: ಸಮಾಜ ಸೇವೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಸಿ.ಎನ್.ಚಂದ್ರಪ್ರಭ ಜೈನ್ ತಿಳಿಸಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ಬುಧವಾರ 193 ಜನರನ್ನು ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ 4 ಬಸ್‌ಗಳಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟು ಮಾತನಾಡಿದರು.
ರೋಟರಿ ಸಂಸ್ಥೆ ಮೂಲಕ ಅನೇಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಸಮಾಜ ಸೇವೆಯ ಮೂಲಕ ಮತ್ತೊಬ್ಬರಿಗೆ ನೆರವು ನೀಡಿದಾಗ ಮನಸ್ಸಿಗೆ ತೃಪ್ತಿ ದೊರೆತಂತಾಗುತ್ತದೆ. ಈ ಮೂಲಕ 193 ಜನರನ್ನು ಕಣ್ಣಿನ ಶಸ ಚಿಕಿತ್ಸೆಗೆ ಕಳುಹಿಸಿದ್ದು, ಎಲ್ಲರಿಗೂ ಮಧ್ಯಾಹ್ನ ಉಪಹಾರ ಹಾಗೂ ಶುದ್ಧ ಕುಡಿಯುವ ನೀರನ್ನು ವ್ಯವಸ್ಥೆ ಮಾಡಲಾಗಿದೆ. ಎಲ್ಲರನ್ನೂ ಕ್ಷೇಮವಾಗಿ ಕರೆತರಲು ಸೂಕ್ತವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಕೆಂಪನಪುರ ಎಂ.ಮಹದೇವಸ್ವಾಮಿ ಮಾತನಾಡಿ, ಕಳೆದ ಒಂದು ವರ್ಷಗಳಿಂದ ರೋಟರಿ ಸಂಸ್ಥೆಯಲ್ಲಿ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಉತ್ತಮ ಜನಸೇವೆ ಮಾಡಿರುವ ಆತ್ಮ ವಿಶ್ವಾಸ ಇದೆ. ಸಾವಿರಾರು ಜನರಿಗೆ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣಾ ಶಿಬಿರ, ಪ್ರತಿಭೆ ಪುರಸ್ಕಾರ ಹಾಗೂ ಇನ್ನಿತರ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ ಎಂದರು.
ರೋಟರಿ ಸಂಸ್ಥೆ ನೂತನ ಕಾರ್ಯದರ್ಶಿ ಅಬ್ದುಲ್ ಅಜೀಜ್, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಅಶೋಕ್, ರಮೇಶ್, ಅರವಿಂದ ಕಣ್ಣಿನ ಆಸ್ಪತ್ರೆ ಸಾರ್ವಜನಿಕ ಅಧಿಕಾರಿ ಡಾ.ವಿಜಯಕಾಂತ್ ಉಪಸ್ಥಿತರಿದ್ದರು.