

ಚಾಮರಾಜನಗರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಆಯೋಜಿಸಿದ್ದ ಮಿನಿ ಉದ್ಯೋಗಮೇಳದಲ್ಲಿ 130 ಖಾಲಿ ಇರುವ ಉದ್ಯೋಗ ಪಡೆದುಕೊಳ್ಳಲು ಸುಮಾರು 337 ಮಂದಿ ಭಾಗವಹಿಸಿದ್ದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿ ಸಹಯೋಗದಲ್ಲಿ ಶುಕ್ರವಾರ ನೇರ ಸಂದರ್ಶನವನ್ನು ಆಯೋಜಿಸಲಾಗಿತ್ತು. ಈ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ ಮತ್ತು ಇತರೆ ಪದವಿ ಪಡೆದ 179 ಯುವಕರು ಹಾಗೂ 185 ಯುವತಿಯರನ್ನು ಒಳಗೊಂಡಂತೆ 337 ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.
ವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್, ಬದನಗುಪ್ಪೆ ಕೈಗಾರಿಕೆ ಪ್ರದೇಶದಲ್ಲಿರುವ ಎಲ್ಕಿಚ್ ಪ್ರೈ.ಲಿ ಕಂಪನಿ, ಆಕ್ಸಿಸ್ ಬ್ಯಾಂಕ್, ಭಾರತ್ ೈನಾನ್ಸ್ ಹಾಗೂ ಮೈಸೂರಿನ ್ಲಾನ್ಸಿ ಇಂಡಿಯಾ ಹೈ ರ್ಪಾಮೆನ್ಸ್ ಮೆಟಿರಿಯಲ್ಸ್ ಪ್ರೈ.ಲಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ನೇರಸಂದರ್ಶನ ನಡೆಯಿತು.