ಹನೂರಿನಲ್ಲಿ ಹೇರ್ ಕಲರಿಂಗ್ ಅಭಿಯಾನಕ್ಕೆ ಮೆಚ್ಚುಗೆ

oppo_2
oppo_2
Published on

ಹನೂರು: ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿರುವ ಕ್ರಿಸ್ತರಾಜ ಕಾನ್ವೆಂಟ್ ಸಭಾಂಗಣದಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಹೇರ್ ಕಲರ್ ಕಂಪನಿ ವತಿಯಿಂದ 3 ದಿನಗಳ ಕಾಲ ಆಯೋಜಿಸಿರುವ ಹೇರ್‌ಕಲರ್ ಉಚಿತ ಅಭಿಯಾನದಲ್ಲಿ ಗುರುವಾರ ಮಹಿಳೆಯರು, ಪುರುಷರು ಹಾಗೂ ಶ್ರೀ ಧರ್ಮಸ್ಥಳ ಸಂಸ್ಥೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮಿಚ್ಛೆಯ ಬಣ್ಣವನ್ನು ಹಾಕಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸವಿತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ರೋಷನ್ ಸ್ಥಳಕ್ಕಾಗಮಿಸಿ ಹಮ್ಮಿಕೊಂಡಿರುವ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶುಕ್ರವಾರ ಹನೂರಿನ ಬಸ್ ನಿಲ್ದಾಣದ ಸಮೀಪವಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೇರ್ ಕಲರಿಂಗ್ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಹೇರ್ ಕಲರಿಂಗ್ ಬಗ್ಗೆ ಈ ಭಾಗದ ಜನರಿಗೆ ಅಷ್ಟೊಂದು ತಿಳಿವಳಿಕೆ ಇರಲಿಲ್ಲ. ಆದರೆ ವಿಜಯವಾಣಿ ಪತ್ರಿಕೆ ಸಹಯೋಗದಲ್ಲಿ ಗಾರ್ನಿಯರ್ ಹೇರ್‌ಕಲರ್ ಉಚಿತ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ. ಪತ್ರಿಕೆಗೆ ಹಾಗೂ ಕಂಪನಿಗೆ ಧನ್ಯವಾದಗಳು.
ಸವಿತಾ, ಸೇವಾ ಪ್ರತಿನಿಧಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹನೂರು.

ಈ ಹಿಂದೆ ಹೇರ್‌ಕಲರ್ ಹಾಕಿಸಿಕೊಳ್ಳುತ್ತಿದ್ದೆ. ಸ್ವಲ್ಪ ಕಿರಿಕಿರಿಯಾಗುತ್ತಿತ್ತು. ಆದರೆ ಈ ಅಭಿಯಾನದಲ್ಲಿ ನನ್ನಿಚ್ಛೆಯ ಬಣ್ಣವನ್ನು ಹಾಕಿಸಿಕೊಂಡಿದ್ದು, ಹಗುರವಾಗಿದೆ. ಈ ಅಭಿಯಾನ ಈ ಭಾಗದ ಜನರಿಗೆ ಅನುಕೂಲವಾಗಿದೆ.
ನಾಗರತ್ನ, ಹನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net