ವಾಲ್ಮೀಕಿ ಆಶ್ರಮ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Published on

ಚಾಮರಾಜನಗರ: ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ವರ್ಗದ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆಗಳಾದ ಕೆ.ಗುಡಿ, ಮುರಟಿಪಾಳ್ಯ, ರಂಗಸಂದ್ರ, ಕೋಳಿಪಾಳ್ಯ, ಪುಣಜನೂರು ಮತ್ತು ಬೇಡಗುಳಿ ಶಾಲೆಗಳಿಗೆ 2024-25ನೇ ಸಾಲಿಗೆ 1 ರಿಂದ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ದಾಖಲಾತಿ ಬಯಸುವ ವಿದ್ಯಾರ್ಥಿಗಳು ಸಂಬಂಧಪಟ್ಟ ಆಶ್ರಮಶಾಲೆ ಮುಖ್ಯ ಶಿಕ್ಷಕರಿಂದ ಅರ್ಜಿ ಪಡೆಯಬಹುದು. ಹರದನಹಳ್ಳಿಯ ಪರಿಶಿಷ್ಟ ವರ್ಗದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ/ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ 2024-25ನೇ ಸಾಲಿಗೆ 5 ರಿಂದ 10ನೇ ತರಗತಿವರೆಗಿನ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ಹಾಗೂ ಅರ್ಹ ಪರಿಶಿಷ್ಟಜಾತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.

ದಾಖಲಾತಿಗಾಗಿ ಕೆ.ಗುಡಿ ಆಶ್ರಮಶಾಲೆ ಮುಖ್ಯಶಿಕ್ಷಕರ ಮೊ.ಸಂ 6360420582, ಮುರಟಿಪಾಳ್ಯ ಆಶ್ರಮಶಾಲೆ ಮುಖ್ಯಶಿಕ್ಷಕರ ಮೊ.ಸಂ 9980457292, ರಂಗಸಂದ್ರ ಆಶ್ರಮಶಾಲೆ ಮುಖ್ಯಶಿಕ್ಷಕರ ಮೊ.ಸಂ 8431750851, ಕೋಳಿಪಾಳ್ಯ ಆಶ್ರಮಶಾಲೆ ಮುಖ್ಯಶಿಕ್ಷಕರ ಮೊ.ಸಂ 8431750851, ಪುಣಜನೂರು ಆಶ್ರಮಶಾಲೆ ಮುಖ್ಯಶಿಕ್ಷಕರ ಮೊ.ಸಂ 9902699370, ಬೇಡಗುಳಿ ಆಶ್ರಮಶಾಲೆ ಮುಖ್ಯಶಿಕ್ಷಕರ ಮೊ.ಸಂ 7483047856 ಇವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೇಲ್ವಿಚಾರಕರು, ಮುಖ್ಯಶಿಕ್ಷಕರು ಹಾಗೂ ನಗರದ ಕೊಳದ ಬೀದಿಯ ಶಿವು ಡ್ರೈವಿಂಗ್ ಸ್ಕೂಲ್ ಪಕ್ಕದಲ್ಲಿರುವ ತಾಲೂಕು ಪರಿಶಿಷ್ಟವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net