16 ವರ್ಷಗಳ ನಂತರ ಹಸು ಕಳ್ಳನ ಬಂಧನ

Crime Logo
Published on

ಕೊಳ್ಳೇಗಾಲ: ಕಳೆದ 16 ವರ್ಷಗಳ ಹಿಂದೆ ಹಸುಗಳನ್ನು ಕಳವು ಮಾಡಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್.ನಗರದ ಇಸ್ಮಾಯಿಲ್ ಷರೀಫ್(56) ಬಂಧಿತ ಆರೋಪಿ. ಈತ 2008ರಲ್ಲಿ ಪಟ್ಟಣದ ಸುತ್ತ ಮುತ್ತಲಿನಲ್ಲಿ ಹಸುಗಳನ್ನು ಕಳವು ಮಾಡಿ ಗೂಡ್ಸ್ ಟೆಂಪೋದಲ್ಲಿ ಸಾಗಣೆ ಮಾಡುವಾಗ ಪೊಲೀಸರನ್ನು ಕಂಡು ಪರಾರಿಯಾಗಿದ್ದ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆದಳದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಎಂ.ಧಮೇರ್ಂದ್ರ. ನೇತೃತ್ವದ ಕೊಳ್ಳೇಗಾಲ ಉಪವಿಭಾಗದ ಅಪರಾಧ ಪತ್ತೆ ದಳದ ಎಎಸ್ಪಿ ತಖೀವುಲ್ಲಾ, ಹೆಡ್‌ಕಾನ್‌ಸ್ಟೇಬಲ್‌ಗಳಾದ ವೆಂಕಟೇಶ್, ಕಿಶೋರ್, ಕಾನ್‌ಸ್ಟೇಬಲ್‌ಗಳಾದ ಬೆಳಿಗೌಡ, ಶಿವಕುಮಾರ್ ಇದ್ದರು. ಈ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net