ಯರಗಂಬಳ್ಳಿ ಗ್ರಾಪಂನಲ್ಲಿ 70 ಲಕ್ಷ ರೂ. ನರೇಗಾ ಕಾಮಗಾರಿ

16 yelandur 01
Published on

ಯಳಂದೂರು: ತಾಲೂಕಿನ ಯರಗಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 70 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಮಾಡಲಾಗಿದೆ ಎಂದು ಗ್ರಾಪಂ ನೋಡಲ್ ಅಧಿಕಾರಿ ಸಕಲೇಶ್ವರ ಮಾಹಿತಿ ನೀಡಿದರು.

ಗ್ರಾಪಂ ಆವರಣದಲ್ಲಿ ಬುಧವಾರ ನಡೆದ ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಈ ಸಾಲಿನಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳು ನಡೆದಿದೆ. ಗ್ರಾಪಂ ವತಿಯಿಂದ 119 ಕಾಮಗಾರಿಗಳು, ತೋಟಗಾರಿಕಾ ಇಲಾಖೆಯ ವತಿಯಿಂದ 9, ಅರಣ್ಯ ಇಲಾಖೆ ವತಿಯಿಂದ 9, ಕೃಷಿ ಇಲಾಖೆ ವತಿಯಿಂದ 19 ಕಾಮಗಾರಿಗಳೂ ಸೇರಿದಂತೆ 156 ಕಾಮಗಾರಿಗಳನ್ನು ಮಾಡಲಾಗಿದ್ದು, ಇದರಲ್ಲಿ ಕೂಲಿ ಮೊತ್ತವಾಗಿ 18.24 ಲಕ್ಷ ರೂ. ಸಾಮಗ್ರಿ ಮೊತ್ತ 51.82 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಇದರಿಂದ 5906 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆ ಒಂದು ಉತ್ತಮ ಯೋಜನೆಯಾಗಿದೆ. ರೈತರು, ಹೈನುಗಾರರು ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಂಡು ತಮ್ಮ ಜಮೀನುಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಇದರಲ್ಲಿ ಅವಕಾಶವಿದೆ. ಇದರೊಂದಿಗೆ ಹೈನುಗಾರರು ಸಹ ಶೆಡ್‌ಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದ್ದು, ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಗ್ರಾಪಂ ಪಿಡಿಒ ಮಂಜುನಾಥ್, ನರೇಗ ಸಂಯೋಜಕ ನಾರಾಯಣ, ಸತ್ಯರಾಜ್ ಸೇರಿದಂತೆ ಅನೇಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net