ರಾಜೀವ್ ಗಾಂಧಿ ಜ್ಯೋತಿಯಾತ್ರೆಗೆ ಅದ್ದೂರಿ ಸ್ವಾಗತ

16rajesh1
Published on

ಚಾಮರಾಜನಗರ: ರಾಮನಗರ, ಮಂಡ್ಯ, ಮೈಸೂರು ಮೂಲಕ ಚಾಮರಾಜನಗರಕ್ಕೆ ಗುರುವಾರ ಆಗಮಿಸಿದ ರಾಜೀವ್ ಗಾಂಧಿ ಜ್ಯೋತಿಯಾತ್ರೆಗೆ ಚಾಮರಾಜನಗರದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.

ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ರಾಜೀವ್‌ಗಾಂಧಿ ಜ್ಯೋತಿಯಾತ್ರೆಗೆ ಸ್ವಾಗತಕೋರಿದರು. ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ರಾಜೀವ್ ಗಾಂಧಿ ಜ್ಯೋತಿಯಾತ್ರೆ ದೇಶದ ಏಕೀಕರಣ, ರಾಷ್ಟ್ರ ನಿರ್ಮಾಣ ಹಾಗೂ ರಾಷ್ಟ್ರದ ಏಕತೆಯನ್ನು ಬಲಪಡಿಸುವ ಸಂದೇಶ ಸಾರುತ್ತದೆ.

ಪ್ರಸ್ತುತ ಸಹೋದರತ್ವ, ಏಕತೆಯ ಅಗತ್ಯತೆ ಎಲ್ಲರಿಗೂ ಬೇಕಾಗಿದೆ. ಈ ನಿಟ್ಟಿನಲ್ಲಿ ಸಾಗುತ್ತಿರುವ ರಾಜೀವ್‌ಗಾಂಧಿ ಜ್ಯೋತಿಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು. ಬಳಿಕ ತಮಿಳುನಾಡಿಗೆ ತೆರಳಿದ ರಾಜೀವ್ ಗಾಂಧಿ ಜ್ಯೋತಿಯಾತ್ರೆಯನ್ನು ಬೀಳ್ಕೊಡಲಾಯಿತು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಸ್ವಾಮಿ. ನಂಜೇದೇವನಪುರ ಗ್ರಾ.ಪಂ. ಅಧ್ಯಕ್ಷ ಶೇಖರಪ್ಪ, ಮಾದಾಪುರ ಗ್ರಾ.ಪಂ. ಅಧ್ಯಕ್ಷ ರೂಪೇಶ್, ಎ.ಎಚ್.ನಸ್ರುಲ್ಲಖಾನ್, ಮರಿಯಾಲದಹುಂಡಿ ಕುಮಾರ್, ಸೇವಾದಳ ಉಪಾಧ್ಯಕ್ಷ ನಾಗರಾಜು, ಉತ್ತವಳ್ಳಿ ಕಾಂತರಾಜು, ರವಿಗೌಡ, ಮಹೇಶ್, ಕಾಂಗ್ರೆಸ್ ಮಹಿಳಾಘಟಕದ ಪದ್ಮಪುರುಷೋತ್ತಮ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net