ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯ ಹಾಗೂ ಎಕ್ಸಾಮಿಕ್ ಎಜುಕೇಷನಲ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನಡುವೆ ಕೌಶಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ವಿವಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಾಪಕರ ಉನ್ನತ ಬೊಧನಾ ಕೌಶಲ ಮತ್ತು ಸಂಶೋಧನಾ ಕೌಶಲಾಭಿವೃದ್ಧಿಯ ಜತೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಹುಮಖ ಪ್ರತಿಭೆ ಹಾಗೂ ಕೌಶಲಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಈ ವೇಳೆ ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ನಮ್ಮ ವಿವಿಯ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ರೂಪಿಸುವುದು ಪ್ರಧಾನ ಆಶಯವಾಗಿದೆ. ಸ್ಪರ್ಧಾತ್ಮಕತೆಯ ನಡುವೆ ಸಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ವಿವಿಧ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿಧಾನ, ಸಂದರ್ಶನ ಎದುರಿಸವ ಕೌಶಲಗಳ ಬಗೆಗೆ ತರಬೇತಿಯನ್ನು ಎಕ್ಸಾಮಿಕ್ ಎಜುಕೇಷನಲ್ ಟೆಕ್ನಾಲಜಿ ಪ್ರೈವೇಟ್ ಸಂಸ್ಥೆ ನೀಡಲಿದ್ದು, ಇದು ಚಾ.ನಗರ ವಿವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಸಿಗಲಿದೆ ಎಂದರು. ಈ ವೇಳೆ ವಿವಿಯ ಪ್ರಾಧ್ಯಾಪಕರು ಇದ್ದರು.