ಸಂತ ತರೇಸಾ ಪ್ರೌಢಶಾಲೆಗೆ ಶೇ.95 ಫಲಿತಾಂಶ

Published on

ಚಾಮರಾಜನಗರ: ತಾಲೂಕಿನ ಮಾದಾಪುರ ಗ್ರಾಮದಲ್ಲಿರುವ ಸಂತ ತೆರೆಸಾ ಪ್ರೌಢಶಾಲೆಗೆ 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.95 ರಷ್ಟು ಫಲಿತಾಂಶ ದೊರೆತಿದೆ.

ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತಮ ಫಲಿತಾಂಶ ಪಡೆದು ಶಾಲೆಗೆ ಉತ್ತಮ ಹೆಸರನ್ನು ತಂದ ಎಲ್ಲ ವಿದ್ಯಾರ್ಥಿಗಳನ್ನು ಶಾಲೆಯ ವ್ಯವಸ್ಥಾಪಕ ಫಾದರ್ ಅಂತೋಣಿ ರಾಜ್, ಮುಖ್ಯ ಶಿಕ್ಷಕ ಜಾಜ ಡಿಸೋಜಾ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net