ರಂಗಭೂಮಿ ಕಲಾವಿದ ರಾಜಪ್ಪ ಇನ್ನಿಲ್ಲ

rajappa
Published on

ಚಾಮರಾಜನಗರ: ನಗರದ ರಾಮಸಮುದ್ರ ಡಾ. ಅಂಬೇಡ್ಕರ್ ಬಡಾವಣೆ ನಿವಾಸಿ, ರಂಗಭೂಮಿ ಕಲಾವಿದ ಜಿ. ರಾಜಪ್ಪ (ರಾಜು) (43) ಬುಧವಾರ ಬೆಳಗಿನ ಜಾವ ನಗರದ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ನಿಧನರಾದರು.

ರಾಜು ಅವರು ಕಿಡ್ನಿ ವೈಫಲ್ಯಗೊಂಡು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ನಗರದ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜು ಅವರು ರಂಗಭೂಮಿ ಕಲಾವಿದರಾಗಿದ್ದರು. ನಾಟಕ ಶಿಕ್ಷಕರಾಗಿಯೂ ಕೆಲಸ ನಿರ್ವಹಿಸಿದ್ದರು.
ರಾಜು ಅವರಿಗೆ ತಾಯಿ, ಪತ್ನಿ, ಓರ್ವ ಮಗ, ಓರ್ವ ಮಗಳು ಇದ್ದಾರೆ. ಬುಧವಾರ ಸಂಜೆ ರಾಮಸಮುದ್ರದದಲ್ಲಿ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net