ಬಡಗಲಮೋಳೆ ಶಿವಣ್ಣ ಉಪಾಧ್ಯಕ್ಷರಾಗಿ ಆಯ್ಕೆ

15rajesh9
Published on

ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಬಡಗಲಮೋಳೆ ಶಿವಣ್ಣ ಅವಿರೋಧ ಆಯ್ಕೆಯಾದರು.

ಕಳೆದ ತಿಂಗಳು ಯಾಲಕೂರು ಮಧು ಕುದೇರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶಿವಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ತೋಟಗಾರಿಕಾ ಇಲಾಖೆ ಅಧಿಕಾರಿ ಕುಮಾರ್ ಅವಿರೋಧ ಆಯ್ಕೆಯನ್ನು ೋಷಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ರವೀಂದ್ರ, ಮಾಜಿ ಅಧ್ಯಕ್ಷೆ ಸವಿತಾ ಕುಮಾರ್, ಮಾಜಿ ಉಪಾಧ್ಯಕ್ಷ ಮಧು, ಶಶಿಕಲಾ ಮಹಾದೇವಮೂರ್ತಿ, ಸದಸ್ಯರಾದ ಸುನೀಲ್, ಮಾಲಾ ಮೋಹನ್, ಕುಮಾರ್, ಜಯಶಂಕರ್, ಸುಂದರ ಶೆಟ್ಟಿ, ನಾಗರಾಜು, ಸುಶೀಲಾ ನಾಗರಾಜ್, ಚಿಕ್ಕ ತಾಯಮ್ಮ, ಮುಖಂಡರಾದ ಬಡಗಲಮೋಳೆ ಚೇತನ್ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net