ಭಗೀರಥ ಮಹರ್ಷಿ ಜಯಂತಿ ಆಚರಣೆ

oppo_2
oppo_2
Published on

ಹನೂರು: ಭಗೀರಥ ಮಹರ್ಷಿ ತಮ್ಮ ಅವಿರತ ಪ್ರಯತ್ನದಿಂದ ದೇವಗಂಗೆಯನ್ನು ಧರೆಗಿಳಿಸಿದ ತ್ರಿವಿಕ್ರಮ ಎಂದು ಶಿರಸ್ತೇದಾರ್ ಮಹದೇವನಾಯ್ಕ ತಿಳಿಸಿದರು.

ಕಂದಾಯ ಇಲಾಖೆಯಿಂದ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ಧ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಇಳಿದಳು. ಈ ದಿನವನ್ನು ಪ್ರತಿ ವರ್ಷ ಗಂಗಾ ಸಪ್ತಮಿ ಎಂದು ಕರೆಯುತ್ತೇವೆ. ಈ ದಿನದಂದೇ ಭಗಿರಥ ಜಯಂತಿಯನ್ನು ಆಚರಿಸಲಾಗುತ್ತದೆ. ಭಗೀರಥ ಮಹರ್ಷಿಗಳು ಮಹಾರಾಜರಾಗಿದ್ದು, ಸಕಲ ವೈಭವಗಳಿದ್ದರೂ ದೇವಗಂಗೆಯನ್ನು ಪಡೆಯಬೇಕು ಎನ್ನುವ ತನ್ನ ತಂದೆ ಹಾಗೂ ತಾತಂದಿರ ಆಸೆಯನ್ನು ಈಡೇರಿಸಲಾಗಲಿಲ್ಲ. ಇದರಿಂದ ಪ್ರತಿಜ್ಞೆ ಮಾಡಿದ ಮಹರ್ಷಿ ಘೋರ ತಪಸ್ಸು ಮಾಡಿ ಸ್ವರ್ಗದಿಂದ ದೇವಗಂಗೆಯನ್ನು ಧರೆಗಿಳಿಸುವುದರ ಮೂಲ ತಮ್ಮ ಪೂರ್ವಜರ ಬೇಡಿಕೆ ಈಡೇರಿಸಿದರು ಎಂದು ತಿಳಿಸಿದರು.

ಈ ವೇಳೆ ಗ್ರಾಮ ಆಡಳಿತಾಧಿಕಾರಿ ಶೇಷಣ್ಣ, ಲೋಕೇಶ್, ಕಾವ್ಯಾ, ಸಮುದಾಯದ ಮುಖಂಡರಾದ ರಂಗಸ್ವಾಮಿ, ಮಹದೇವಶೆಟ್ಟಿ, ಕಾಮಶೆಟ್ಟಿ, ಬಸವರಾಜು, ಜಯರಾಜು ಹಾಗೂ ಕಂದಾಯ ಇಲಾಖೆಯ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net