ಚಾಮರಾಜನಗರ : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹಾಗೂ ಸೃಜನಶೀಲತೆ ಹೊರಹೊಮ್ಮಲು ಬೇಸಿಗೆ ಶಿಬಿರ ಸಹಕಾರಿ ಎಂದು ಗ್ರಾಮದ ಯಜಮಾನ ನಾಗರಾಜು ತಿಳಿಸಿದರು.
ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಕನಸು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನಸಿನ ಚಿನ್ನರ ಲೋಕ ಮಕ್ಕಳ ಬೇಸಿಗೆ ಶಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ತಾಂತ್ರಿಕ ಜಗತ್ತಿನಲ್ಲಿ ವಿದ್ಯಾಭ್ಯಾಸದ ಜತೆಗೆ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ನೃತ್ಯ, ಹಾಡು, ಚಿತ್ರಕಲೆ, ನಾಟಕ, ಕ್ರೀಡೆ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರ ಸೃಜಶೀಲತೆ ಹೆಚ್ಚುತ್ತದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ರೇಖಾ ಮಹೇಶ್ ಮಾತನಾಡಿದರು.
ಗ್ರಾಮದ ಯಜಮಾನರಾದ ಕುಂಬಯ್ಯ, ಪ್ರಭುಸ್ವಾಮಿ, ಗ್ರಾಪಂ ಸದಸ್ಯರಾದ ಗೋವಿಂದರಾಜ್, ಬಸವಣ್ಣ, ಅಂಗಡಿ ಸೋಮಣ್ಣ, ಮಂಜು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಪಿ.ಪುಟ್ಟರಾಜು, ಶಿಕ್ಷಕ ನಾರಾಯಣ, ನಂಜುಂಡಸ್ವಾಮಿ ರಾಜಮ್ಮ ಇತರರು ಇದ್ದರು.