ಚಾಮರಾಜನಗರ: ನಗರದ ಚೆನ್ನಿಪುರ ಮೋಳೆಯಲ್ಲಿರುವ ಸೇವಾ ಭಾರತಿ ಪಬ್ಲಿಕ್ ಶಾಲೆಗೆ ಸತತ 9ನೇ ಬಾರಿಗೆ ಶೇ.100 ಫಲಿತಾಂಶ ಬಂದಿದೆ.
ಸಿಬಿಎಸ್‌ಇ 10 ನೇ ತರಗತಿಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶಾಲೆಯ 73 ವಿದ್ಯಾರ್ಥಿಗಳೂ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿ ಎಂ.ಪಿ.ವಿದ್ಯಾಶ್ರೇಯಾ 600ಕ್ಕೆ 570 ಅಂಕಗಳೊಂದಿಗೆ ಶೇ.95 ಫಲಿತಾಂಶ ಪಡೆದು ಶಾಲೆಗೆ ಟಾಪರ್ ಆಗಿದ್ದಾಳೆ. ಪರೀಕ್ಷೆ ಬರೆದ 73 ವಿದ್ಯಾರ್ಥಿಗಳಲ್ಲಿ 9 ಅತ್ಯುನ್ನತ ಶ್ರೇಣಿ, 49 ಪ್ರಥಮ ಶ್ರೇಣಿ, 14 ದ್ವಿತೀಯ ಶ್ರೇಣಿ, 1 ತೃತೀಯ ಶ್ರೇಣಿ ಸೇರಿದಂತೆ ಶಾಲೆಗೆ ಶೇ.100 ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸೇವಾಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಅಭಿನಂದಿಸಿದ್ದಾರೆ.