

ಚಾಮರಾಜನಗರ: ಸರ್ಕಾರ ಕೊಡುವ ಬೆಳೆ ನಷ್ಟದ ಪರಿಹಾರ ರೈತನ ನಷ್ಟವನ್ನು ತುಂಬಲು ಸಾಧ್ಯವಿಲ್ಲ ಎಂದು ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಲತಾ ತಿಳಿಸಿದ್ದಾರೆ.
ಬಿರುಗಾಳಿ ಸಹಿತ ಮಳೆಗೆ ಬೆಳೆ ನಷ್ಟ ಉಂಟಾಗಿರುವ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವವ ಅವರು, ಈ ಬಗ್ಗೆ ಜಿಲ್ಲಾಡಳಿತ ಸರ್ಕಾರದ ಗಮನ ಸೆಳೆಯಬೇಕು. ಸರ್ಕಾರಕ್ಕೆ ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಬೇಕು. ಕನಿಷ್ಠ 1 ಎಕರೆಗೆ 1.50 ಲಕ್ಷ ರೂ. ಪರಿಹಾರ ನೀಡಬೇಕು. ಸತ್ತೇಗಾಲ ಭಾಗದಲ್ಲಿ ಪೂರ್ವ ಮುಂಗಾರಿನ ಗಾಳಿ, ಮಳೆಗೆ ಹಲವು ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ ಎಂದಿದ್ದಾರೆ.