

ಚಾಮರಾಜನಗರ: ಗಾಳಿ ಮಳೆಯಿಂದ ಸಾಕಷ್ಟು ರೈತರ ಬಾಳೆ ಬೆಳೆ ನಾಶವಾಗಿದೆ. ಇದರಿಂದಾಗಿ ಫಸಲ್ ಬಿಮಾ ಯೋಜನೆಗೆ ಬಾಳೆ ಬೆಳೆಯನ್ನು ಸೇರ್ಪಡೆ ಮಾಡಬೇಕು ಎಂದು ಕೊಳ್ಳೇಗಾಲ ರೈತ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾದಮ್ಮ ತಿಳಿಸಿದ್ದಾರೆ.
ಬಿರುಗಾಳಿ ಮಳೆಗೆ ಬೆಳೆ ನಷ್ಟದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಅವರು, ವಿಮೆ ಯೋಜನೆಯಡಿ ಪರಿಹಾರ ನೀತಿ ರೂಪಿಸಬೇಕು. ಸರ್ಕಾರ ಕೊಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ವೈಜ್ಞಾನಿಕವಾಗಿ ಪರಿಹಾರ ವಿತರಣೆ ಮಾಡಬೇಕು ಎಂದು ಹೇಳಿದ್ದಾರೆ.