

ಚಾಮರಾಜನಗರ: ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ವಿಮೆ ಮೊತ್ತ ನೀಡಲು ಕ್ರಮ ವಹಿಸಬೇಕಿದೆ ಎಂದು ಯಳಂದೂರಿನ ಗಂಗವಾಡಿಯ ರೈತ ನಾರಾಯಣ ಹೇಳಿದ್ದಾರೆ.
ಬಿರುಗಾಳಿ ಮಳೆಗೆ ಬೆಳೆ ನಷ್ಟದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಅವರು, ಕಳೆದ ವರ್ಷದಿಂದ ಮಳೆಯಾಗದೆ ಇರುವುದರಿಂದ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ ಎಂದು ಇದನ್ನೇ ನಂಬಿಕೊಂಡು ಜೀವನ ನಡೆಸುವ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ ಎಂದಿದ್ದಾರೆ.