ನಷ್ಟಕ್ಕೆ ಅನುಗುಣವಾಗಿ ಪರಿಹಾರ ನೀಡಿ

Bhupathi
Published on

ಚಾಮರಾಜನಗರ: ನಮ್ಮ ಒಂದು ಎಕರೆಯಲ್ಲಿ 1.70 ಲಕ್ಷ ರೂ. ಖರ್ಚು ಮಾಡಿ ಬಾಳೆ ಬೆಳೆದಿದ್ದು, ಗೊನೆಗಳು ಬಿಟ್ಟಿದ್ದವು. ಆದರೆ ಬಿರುಗಾಳಿ ಸಹಿತ ಮಳೆಯಿಂದಾಗಿ ಫಸಲು ನಾಶವಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಹನೂರಿನ ನಾಗಣ್ಣ ನಗರದ ಭೂಪತಿ ಅಳಲು ತೋಡಿಕೊಂಡಿದ್ದಾರೆ.

ಬಿರುಗಾಳಿ ಮಳೆಗೆ ಬೆಳೆ ನಷ್ಟದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವವ ಅವರು, ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಹೋಗಿದ್ದಾರೆ. ಸರ್ಕಾರದಿಂದ ಬೆಳೆ ನಷ್ಟಕ್ಕೆ ನಿಗದಿಪಡಿಸಿರುವ ಹಣವಷ್ಟೇ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ಪರಿಹಾರ ಸಾಲುವುದಿಲ್ಲ. ಆದ್ದರಿಂದ ನಷ್ಟಕ್ಕೆ ಅನುಗುಣವಾಗಿ ಸರ್ಕಾರ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net