

ಚಾಮರಾಜನಗರ: ಜಿಲ್ಲೆಯಲ್ಲಿ ಈವರೆಗೆ 1,500 ಎಕರೆಯಷ್ಟು ಬಾಳೆ ನಾಶವಾಗಿದೆ ಎಂಬ ವರದಿ ಬಂದಿದೆ. ಮುಂದಿನ ದಿನಗಳಲ್ಲಿ ಮಳೆಯಾದರೆ ಮತ್ತಷ್ಟು ಬಾಳೆ ಬೆಳೆ ಹಾನಿಯಾಗುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಎ.ವಿ.ಸಂಜಯ್ ತಿಳಿಸಿದ್ದಾರೆ.
ರಾಷ್ಟ್ರ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಯಂತೆ ಪರಿಹಾರ ವಿತರಣೆ ಮಾಡಲಾಗುತ್ತದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಬಾಳೆಯೂ ಒಂದು. ಆದರೆ ಅದು ಗಟ್ಟಿಯಾಗಿ ಇಲ್ಲದೆ ಇರುವುದರಿಂದ ಗಾಳಿ, ಮಳೆಗೆ ಬೀಳುತ್ತದೆ. ಪ್ರಕೃತಿ ವಿಕೋಪ ತಡೆಯಲು ಸಾಧ್ಯವಿಲ್ಲ. ಆದರೆ ಬೆಳೆ ಹಾನಿ ತಪ್ಪಿಸಲು ಇರುವ ಮಾರ್ಗಗಳನ್ನು ಅನುಸರಿಸಿ ಬೆಳೆ ರಕ್ಷಿಸಿಕೊಳ್ಳಬಹುದು ಎಂದು ಮಾಹಿತಿ ನಿಡಿದ್ದಾರೆ.