ಮಹಾ ರಕ್ತದಾನಿಗಳಿಬ್ಬರಿಗೆ ಸನ್ಮಾನ

10rajesh6
Published on

ಚಾಮರಾಜನಗರ: ದಾನದಲ್ಲೇ ಶ್ರೇಷ್ಠ ಎನಿಸಿಕೊಂಡಿರುವ ರಕ್ತದಾನವನ್ನು 50ಕ್ಕೂ ಹೆಚ್ಚು ಭಾರಿ ಮಾಡಿರುವ ಇಬ್ಬರು ರಕ್ತದಾನಿಗಳಿಗೆ ಸನ್ಮಾನ ಮಾಡಲಾಯಿತು.

ನಗರದ ರೋಟರಿ ಭವನದಲ್ಲಿ ರೋಟರಿ ಸಿಲ್ಕ್ ಸಿಟಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಸಂಜೀವಿನಿ ಟ್ರಸ್ಟ್ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ರಕ್ತದಾನಿಗಳಾದ ಮಹದೇವಪ್ಪ, ಎಚ್.ಎಂ. ಅಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ರಕ್ತದಾನಿ ಮಹದೇವಪ್ಪ ಮಾತನಾಡಿ, ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ರಕ್ತದಾನ ಎನ್ನವುದಕ್ಕಿಂತ ಸೇವೆ ಮುಖ್ಯ ಎಂದರು. ಮತ್ತೋರ್ವ ರಕ್ತದಾನಿ ಎಚ್.ಎಂ.ಅಜಯ್ ಮಾತನಾಡಿ, ರಕ್ತ ನೀಡುವ ಮೂಲಕ ಒಂದು ಅಮೂಲ್ಯವಾದ ಜೀವವನ್ನು ಉಳಿಸಿದ ತೃಪ್ತಿ ಸಿಗುತ್ತದೆ. ಹೀಗಾಗಿ ಯುವಕರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಕರೆ ಕೊಟ್ಟರು.

ಯುವರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯೆ ಡಾ.ರೇಣುಕಾದೇವಿ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಮಹೇಶ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಅಕ್ಷಯ್, ಕಾರ್ಯದರ್ಶಿ ಮಾಣಿಕ್ಯ ಚಂದ್, ರವಿ, ವಲಯ ಪ್ರತಿನಿಧಿ ಚೈತನ್ಯ ಜಿ ಹೆಗಡೆ, ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್, ಡಿ.ಪಿ. ವಿಶ್ವಾಸ್, ಮುರುಗೇಂದ್ರಸ್ವಾಮಿ, ಪಿ.ರಾಜು, ಪ್ರಶಾಂತ್, ಸಂಜೀವಿನಿ ಟ್ರಸ್ಟ್‌ನ ಸತೀಶ್‌ಕುಮಾರ್, ಸದಸ್ಯರಾದ ರಾಜು, ಡಾ.ಪರಮೇಶ್ವಪ್ಪ, ಸುರೇಶ್‌ಗೌಡ, ವಿರಾಟ್ ಶಿವು, ಅಶ್ವಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net