ಮೊಮ್ಮಗನ ಬಳಿಕ ಅಜ್ಜಿ ಸಾವು

Published on

ಚಾಮರಾಜನಗರ: ಬೈಕ್ ಡಿಕ್ಕಿ ಹೊಡೆದು ಮೊಮ್ಮಗು ಮೃತಪಟ್ಟಿದ್ದ ಅಪಘಾತ ಪ್ರಕರಣದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅಜ್ಜಿಯೂ ಮೃತಪಟ್ಟಿದ್ದಾರೆ.

ಏ.21ರಂದು ನಗರದ ಹೊರವಲಯದ ಸೋಮವಾರಪೇಟೆ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಮನೆ ಸಮೀಪ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ ಅಜ್ಜಿಗೆ ಬೈಕ್ ಡಿಕ್ಕಿ ಹೊಡೆದು 1.6 ವರ್ಷದ ಮಗು ಅಭಯ್ ಮೃತಪಟ್ಟಿದ್ದ. ವೃದ್ಧೆ ಶೀಲಮ್ಮ ಅವರಿಗೆ ಕಾಲು ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿತ್ತು. ಗಾಯಾಳು ಶೀಲಮ್ಮ ಅವರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ಮಗು ಮೃತಪಟ್ಟಿದ ಸೂತಕದ ಮನೆಯಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಬೈಕ್‌ನಲ್ಲಿ ಡಿಕ್ಕಿ ಹೊಡೆದಿದ್ದ ಆರೋಪಿಗಳ ವಿರುದ್ಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net