ಬೋನಿಗೆ ಬಿದ್ದ ಚಿರತೆ

Published on

ಚಾಮರಾಜನಗರ: ತಾಲೂಕಿನ ಪಣ್ಯದಹುಂಡಿ ಹೆಗ್ಗೋಠಾರ ಗ್ರಾಮದ ಮಧ್ಯೆ ಇರುವ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
ಎರಡೂ ಗ್ರಾಮಗಳ ಮಾರ್ಗದ ಮಧ್ಯೆ ಇರುವ ಕುಳ್ಳಮ್ಮನ ತಾಯಿ ದೇವಸ್ಥಾನದ ಬಳಿ ಇರುವ ಪಣ್ಯದಹುಂಡಿ ಡೇರಿ ಮಾಜಿ ಅಧ್ಯಕ್ಷ ಸಂತೋಷ್ ಅವರ ಜಮೀನಿನಲ್ಲಿ ಭಾನುವಾರ ರಾತ್ರಿ ಚಿರತೆ ಸೆರೆ ಸಿಕ್ಕಿದೆ. ಏ.28ರಂದು ಜಮೀನಿಗೆ ಬಂದಿದ್ದ ಚಿರತೆ ಸಾಕು ನಾಯಿಯ ಮೇಲೆ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಬೋನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಮತ್ತೆ ಜಮೀನಿಗೆ ಬಂದ ಚಿರತೆ ಭಾನುವಾರ ರಾತ್ರಿ ಸೆರೆ ಸಿಕ್ಕಿದೆ. ಇದನ್ನು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net