

ಚಾಮರಾಜನಗರ: ಸ್ವಾಭಿಮಾನದ ಚಕ್ರವರ್ತಿ, ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ರಾಮಸಮುದ್ರದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರಸಭೆ ಮಾಜಿ ಸದಸ್ಯ, ದೊಡ್ಡ ಯಜಮಾನ ಬಿ.ನಾಗರಾಜು ಮಾತನಾಡಿ, ಸಂಸದ ವಿ.ಶ್ರೀನಿವಾಸಪ್ರಸಾದ್ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ-ಸಿದ್ಧಾಂತ ಅಳವಡಿಸಿಕೊಂಡಿದ್ದರು. ಅವರು ಶಾಸಕರು, ಸಚಿವರು ಹಾಗೂ ಸಂಸದರು, ಕೇಂದ್ರ ಸಚಿವರಾಗಿದ್ದು, ರಾಜಕಾರಣದಲ್ಲಿ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ದೇಶ, ರಾಜ್ಯ, ಜಿಲ್ಲೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆಶಿಸಿದರು.
ಯಜಮಾನರಾದ ಪಾಪಣ್ಣ, ನಂಜುಂಡ, ಬಸವರಾಜು, ಮಹದೇವ, ಡಿ.ನಂಜಯ್ಯ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗದ ಎನ್.ಪ್ರಸನ್ನ, ಚಿಗುರಿ ಬಂಗಾರು, ಬಸವರಾಜು, ವೇಣುಗೋಪಾಲ್, ಪರಶಿವಯ್ಯ, ರಾಜಪ್ಪ, ಕೆ.ನಾಗರಾಜು, ಆಂಜನೇಯ, ರಾಮು, ಶ್ರೀಧರ್, ಮಂಜು, ನಾಗೇಂದ್ರ, ಅಬ್ಬಾರಿ ರೇವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ ಪ್ರಧಾನ ಕಾರ್ಯದರ್ಶಿ ಮನೋಜ್ ಇದ್ದರು.