ಕಾಣೆಯಾಗಿದ್ದ ಬಾಲಕ ಕಬ್ಬಿನ ಗದ್ದೆಯಲ್ಲಿ ಪತ್ತೆ

Published on

ಚಾಮರಾಜನಗರ: ತಾಲೂಕಿನ ಗ್ರಾಮವೊಂದರಲ್ಲಿ ಅಪ್ಪ-ಅಮ್ಮ ಬೈಯ್ಯುತ್ತಾರೆಂದು ಹೆದರಿ ಎರಡು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ 8 ವರ್ಷದ ಬಾಲಕ ಸೋಮವಾರ ಅದೇ ಊರಿನ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದಾನೆ.

ಮನೆಯಲ್ಲಿದ್ದ ನೂರು ರೂ. ಖರ್ಚು ಮಾಡಿಕೊಂಡಿದ್ದ ಬಾಲಕ ಸೋಮವಾರ ಕಾಣೆಯಾಗಿದ್ದ. ಪೊಲೀಸ್ ಠಾಣೆಗೆ ದೂರು ನೀಡುವ ಮೊದಲು ಎಲ್ಲೆಡೆ ಹುಡುಕುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಬಾಲಕನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಪತ್ತೆಗೆ ಮನವಿ ಮಾಡಲಾಗಿತ್ತು. ಆದರೆ ಬಾಲಕ ಎಲ್ಲೂ ಸಿಗಲಿಲ್ಲ. ಸೋಮವಾರ ಬೆಳಗ್ಗೆ ಗ್ರಾಮಸ್ಥರೊಬ್ಬರು ತಮ್ಮ ಕಬ್ಬಿನ ಗದ್ದೆಗೆ ಹೋದಾಗ ಅಲ್ಲಿ ಬಾಲಕ ಸಿಕ್ಕಿದ್ದಾನೆ. ವಿಚಾರಿಸಿದಾಗ ಎರಡು ದಿನಗಳಿಂದ ಬಾಲಕ ಇಲ್ಲೇ ಇದ್ದ. ರಾತ್ರಿಯೆಲ್ಲ ಕಬ್ಬಿನ ಗದ್ದೆಯಲ್ಲೇ ಮಲಗಿದ್ದ ಎಂದು ಗೊತ್ತಾಗಿದೆ. ಈಗ ಬಾಲಕ ತಂದೆ-ತಾಯಿಯೊಂದಿಗೆ ಇದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net